ಆರೋಗ್ಯಕಾರಿ ಜೀವನಶೈಲಿ ಅನುಸರಿಸದೇ ಇರುವುದು, ಪೌಷ್ಟಿ ಕಾಂಶ ಇರುವ ಆರೋಗ್ಯಕಾರಿ ಆಹಾರ ಪದಾ ರ್ಥಗಳ ಸೇವ ನೆಯ ಕೊರತೆ, ಜಂಕ್ ಫುಡ್ಗಳ ಸೇವನೆ, ಸರಿಯಾಗಿ ನಿದ್ದೆ ಮಾಡದೇ ಇರುವುದು, ಹೀಗೆ ಇಂತಹ ಕೆಟ್ಟ ಅಭ್ಯಾಸಗಳಿಂದ, ಪದೇ ಪದೇ ಸುಸ್ತಾಗು ವುದು, ಯಾವುದೇ ಕೆಲಸವನ್ನೂ ಕೂಡ ಮಾಡಲು ಸಾಧ್ಯವಾ ಗದೇ ಇರುವುದು, ಹೀಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ.
ಶೀಘ್ರದಲ್ಲೇ ಶಿಕ್ಷಕರ ಸಮಸ್ಯೆಗೆ ಮುಕ್ತಿ ಹಾಡುತ್ತೇನೆ: ಸಿಎಂ ಸಿದ್ದರಾಮಯ್ಯ
ಮನುಷ್ಯನಿಗೆ ತನ್ನ ದೈಹಿಕ ಕಾರ್ಯ ಚಟುವಟಿಕೆ ಸೇರಿದಂತೆ ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಪೂರೈಸಿಕೊಳ್ಳಲು ದೇಹದ ಪ್ರತಿಯೊಂದು ಭಾಗಕ್ಕೂ ಶಕ್ತಿ ಹಾಗೂ ಚೈತನ್ಯದ ಅಗತ್ಯವಿದೆ. ಇದಕ್ಕಾಗಿ ಆರೋಗ್ಯಕರವಾದ ಆಹಾರಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಳ್ಳಬೇಕು ಜೊತೆಗೆ ಉತ್ತಮ ಜೀವನ ಶೈಲಿಯನ್ನು ಹೊಂದಬೇಕು.
ದೇಹವು ಆರೋಗ್ಯವಾಗಿರಲು ಮತ್ತು ಕ್ರಿಯಾಶೀಲವಾಗಿರಲು ಎಲ್ಲಾ ರೀತಿಯ ಪೋಷಕಾಂಶಗಳು ಅತ್ಯವಶ್ಯಕವಾಗಿವೆ. ಅದರಲ್ಲಿ ವಿಟಮಿನ್ ಡಿ ಕೂಡ ಒಂದು. ವಿಟಮಿನ್ ಡಿ ಬಗ್ಗೆ ಬಹುತೇಕರಿಗೆ ಗೊತ್ತಿದೆ. ವಿಟಮಿನ್ ಡಿ ನಮಗೆ ಆರೋಗ್ಯಕರ ಆಹಾರ ಮತ್ತು ಸೂರ್ಯನ ಬೆಳಕಿನಿಂದ ಸಿಗುತ್ತೆ
ವಿಟಮಿನ್ ಡಿ ಇದ್ದರೆ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯಕಾರಿ. ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಒಟ್ಟಾರೆ ಆರೋಗ್ಯ ಚೆನ್ನಾಗಿರಲು ಮೂಳೆಗಳ ಆರೊಗ್ಯ ಸಹ ಉತ್ತಮವಾಗಿರಬೇಕು. ವಿಟಮಿನ್ ಡಿ ಮೂಳೆಗಳ ಆರೋಗ್ಯಕ್ಕೂ ಸಹಾಯ ಮಾಡುತ್ತದೆ.
ಸ್ನಾಯುಗಳ ಬೆಳವಣಿಗೆಯ ಜೊತೆಗೆ ವಿಟಮಿನ್ ಡಿ ಚರ್ಮದ ಆರೋಗ್ಯವನ್ನೂ ಸುಧಾರಿಸುತ್ತದೆ. ವಿಟಮಿನ್ ಡಿ ದೇಹಕ್ಕೆ ಬೇಕಾದ ಅಗತ್ಯ ಆರೋಗ್ಯ ಪ್ರಯೋಜನ ನೀಡುತ್ತದೆ. ಇದು ಅಧಿಕ ರಕ್ತದೊತ್ತಡದ ಅಪಾಯ ಕಡಿಮೆ ಮಾಡುತ್ತದೆ.
ಒಂದು ಸಂಶೋಧನೆ ಪ್ರಕಾರ, ದೇಹದಲ್ಲಿ ವಿಟಮಿನ್ ಡಿ ಅಗತ್ಯತೆಯು 400 IU ನಿಂದ 800 IU ವರೆಗೆ ಇದೆ. ತುಂಬಾ ಜನರು ಕಡಿಮೆ ಪ್ರಮಾಣದ ವಿಟಮಿನ್ ಡಿ ಹೊಂದಿದ್ದು, ವಿಟಮಿನ್ ಡಿ ಕೊರತೆ ಅನುಭವಿಸುತ್ತಿದ್ದಾರೆ. ಮಹಿಳೆಯರು, ಪುರುಷರು, ಮಕ್ಕಳು ಸರಿಯಾದ ಪ್ರಮಾಣದಲ್ಲಿ ವಿಟಮಿನ್ ಡಿ ಪಡೆಯಬೇಕು.
ವಿಟಮಿನ್ ಡಿ ಕೊರತೆಯಾದರೆ ದೇಹವು ಹೆಚ್ಚು ಆಯಾಸ ಅನುಭವಿಸುತ್ತದೆ. ಮೂಳೆಗಳ ನೋವು ಹೆಚ್ಚಾಗುತ್ತದೆ. ಜೊತೆಗೆ ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯು ಸ್ನಾಯುಗಳು ದುರ್ಬಲವಾಗಲು ಕಾರಣಾಗುತ್ತದೆ. ಹೀಗಾಗಿ ಸಣ್ಣ ಗಾಯವು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.
ವಿಟಮಿನ್ ಡಿ ಕೊರತೆಯು ಒಟ್ಟಾರೆ ಆರೋಗ್ಯ ಹದಗೆಡಿಸುತ್ತದೆ. ಇದು ಬೆನ್ನುನೋವಿನ ಸಮಸ್ಯೆ ಹೆಚ್ಚಿಸುತ್ತದೆ. ವಿಟಮಿನ್ ಡಿ ಕೊರತೆಯು ಅನೇಕ ಸಮಸ್ಯೆ ಉಂಟು ಮಾಡುತ್ತದೆ. ಯಾವಾಗಲೂ ದಣಿವು ಇರುತ್ತದೆ. ದೇಹದಲ್ಲಿ ಸುಕ್ಕುಗಳು ಕಾಣಿಸುತ್ತವೆ.
ಸ್ನಾಯುಗಳಲ್ಲಿ ದೌರ್ಬಲ್ಯ ಉಂಟಾಗುತ್ತದೆ. ಸದಾ ಸುಸ್ತು ಆಗುತ್ತದೆ. ವಿಟಮಿನ್ ಡಿ ಕೊರತೆಯು ಕ್ಯಾನ್ಸರ್ ಅಪಾಯ ಉಂಟು ಮಾಡುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಅಧಿಕ ರಕ್ತದೊತ್ತಡದ ಸಮಸ್ಯೆ, ಒತ್ತಡ ಮತ್ತು ಖಿನ್ನತೆ ಹೆಚ್ಚುತ್ತದೆ. ಮಕ್ಕಳಲ್ಲಿ ರಿಕೆಟ್ಗಟ್ಸ್ ಕಾಯಿಲೆ, ಕೂದಲು ಉದುರುವುದು, ಅಲೋಪೆಸಿಯಾ ಏರಿಯಾಟಾ ಕಾಯಿಲೆ ಉಂಟಾಗುತ್ತದೆ.
ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ಸಮಸ್ಯೆ ತಪ್ಪಿಸಲು ನಮ್ಮ ದೇಹಕ್ಕೆ ವಿಟಮಿನ್ ಡಿ ಬೇಕು. ಒಟ್ಟಾರೆ ದೇಹದ ಆರೋಗ್ಯಕ್ಕೆ ವಿಟಮಿನ್ ಡಿ ಬೇಕು. ಹಾಗಾಗಿ ವಿಟಮಿನ್ ಡಿ ಸಮೃದ್ಧ ಆಹಾರ, ಪೂರಕ ಸೇವಿಸಿ. ಜೊತೆಗೆ ಪ್ರತಿದಿನ 15 ನಿಮಿಷ ಸೂರ್ಯನ ಬೆಳಕಿಗೆ ಮೈಯೊಡ್ಡಿ. ಪ್ರತಿದಿನ ಬೆಳಿಗ್ಗೆ ಸೈಕ್ಲಿಂಗ್, ಓಟ, ವ್ಯಾಯಾಮ ಮಾಡಿ.