ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ಬುಧವಾರ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್: ಇಲ್ಲಿದೆ JOB, ಸಂಬಳ ಎಷ್ಟು ಗೊತ್ತಾ!?
ಚಾರ್ಜ್ ಶೀಟ್ ನಲ್ಲಿ ರೇಣುಕಾಸ್ವಾಮಿ ಕಿಡ್ನಾಪ್, ಹಲ್ಲೆ, ಮರ್ಡರ್, ಸಾಕ್ಷ್ಯ ನಾಶ ಹೀಗೆ ಪ್ರತಿಯೊಂದರಲ್ಲೂ ಸಿಕ್ಕಿರುವ ಸಾಕ್ಷಿಗಳು ನಟ ದರ್ಶನ್ ಅವರನ್ನೇ ಬೊಟ್ಟು ಮಾಡಿ ತೋರುತ್ತಿವೆ ಎನ್ನಲಾಗಿದೆ.
ಕೊಲೆ ಕೇಸ್ನಲ್ಲಿ ನಟ ದರ್ಶನ್ ವಿರುದ್ಧ ಪೊಲೀಸರಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 20ಕ್ಕೂ ಹೆಚ್ಚು ಸಾಕ್ಷ್ಯಗಳು.
ಪೊಲೀಸರಿಗೆ ಸಿಕ್ಕಿರೋ ಸಾಕ್ಷ್ಯಗಳೇನು..?
ಪವನ್ಗೆ ಹೇಳಿ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕರೆಸಿರೋದು
ಪವನ್ ರಾಘವೇಂದ್ರಗೆ ಹೇಳಿ ರೇಣುಕಾ ಕಿಡ್ನಾಪ್ ಮಾಡಿರೋದು
ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ
ಪಬ್ನಿಂದ ದರ್ಶನ್ ಪವಿತ್ರಾಗೌಡ ಮನೆಗೆ ಹೋಗಿದ್ದು
ಪವಿತ್ರಾ ಕರೆದುಕೊಂಡು ಪಟ್ಟಣಗೆರೆ ಶೆಡ್ಗೆ ಹೋಗಿದ್ದು
ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಪಬ್ಗೆ ಬಂದಿದ್ದು
ಪಬ್ನಲ್ಲಿ ಇರುವಾಗ ರೇಣುಕಾಸ್ವಾಮಿ ಫೋಟೋ ಬಂದಿದ್ದು
ಮತ್ತೆ ಪಬ್ನಿಂದ ಪಟ್ಟಣಗೆರೆ ಶೆಡ್ಗೆ ದರ್ಶನ್ ಹೋಗಿದ್ದು
ಪಬ್ನಿಂದ RR ನಗರ ಮನೆಗೆ ಬಂದು ಬಟ್ಟೆ ಬದಲಿಸಿದ್ದು
ಬೆಳಗ್ಗೆ ಬನಶಂಕರಿಯ ವಿಜಯಲಕ್ಷ್ಮಿ ಮನೆಗೆ ಹೋಗಿದ್ದು
ವಿಜಯಲಕ್ಷ್ಮಿ ಮನೆಯಲ್ಲಿ ಪೂಜೆಯಲ್ಲಿ ಭಾಗಿಯಾಗಿದ್ದ ದರ್ಶನ್
ವಿಜಯಲಕ್ಷ್ಮಿ ಮನೆಯಲ್ಲಿ ಶೂ ಬಿಟ್ಟು ಹೋಗಿದ್ದ ದರ್ಶನ್
ನಂತರ ಮೈಸೂರಿನ ಫಾರ್ಮ್ಹೌಸ್ಗೆ, ಅಲ್ಲಿಂದ ಹೋಟೆಲ್
ಹೋಟೆಲ್ನಿಂದ ಶೂಟಿಂಗ್ಗೆ ಹೋಗಿದ್ದು, ಮತ್ತೆ ಹೋಟೆಲ್ಗೆ ಬಂದಿದ್ದು
ಇದೆಲ್ಲದರ ಸಿಸಿಟಿವಿ, ಟವರ್ ಲೊಕೇಷನ್ ತನಿಖೆಯಲ್ಲಿ ಸಿಕ್ಕಿವೆ
ಸಿಸಿಟಿವಿ ದೃಶ್ಯಗಳಿಗೂ ಟವರ್ ಲೊಕೇಷನ್ಗಳಿಗೂ ಮ್ಯಾಚ್ ಆಗಿದೆ.
ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಪಾತ್ರವೇನು ಎಂದು ಇಷ್ಟು ದಿನ ಪ್ರಶ್ನಿಸುತ್ತಿದ್ದವರಿಗೆ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ ತಕ್ಕ ಉತ್ತರ ನೀಡಿದೆ.