ಒಂದೆಡೆ ಬಾಂಗ್ಲಾ ಟೆಸ್ಟ್ ಸರಣಿಗೆ ಕೌಂಟ್ ಡೌನ್ ಶುರುವಾಗಿದ್ದು, ಇನ್ನೊಂದೆಡೆ 1 ತಿಂಗಳಿಂದ ಬ್ಯಾಟ್ ಮುಟ್ಟದೇ ಕಿಂಗ್ ಕೊಹ್ಲಿ ಸೈಲೆಂಟ್ ಆಗಿದ್ದಾರೆ.
ಬಿಟ್ಟು ಬಿಡದೇ ಕಾಡುತ್ತಿರುವ ಚಿರತೆ ಕಾಟ: ಕ್ಯಾಲಸನಹಳ್ಳಿಯಲ್ಲಿ ಭಯಾನಕ ದೃಶ್ಯ ಸೆರೆ!
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಆರಂಭದೊಂದಿಗೆ ಟೀಮ್ ಇಂಡಿಯಾ ಟೆಸ್ಟ್ ಸೀಸನ್ ಆರಂಭವಾಗಲಿದೆ. ಶ್ರೀಲಂಕಾ ಪ್ರವಾಸದ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಮ್ ಇಂಡಿಯಾ ಸ್ಟಾರ್ಸ್ ಇದೀಗ ಕ್ರಿಕೆಟ್ ಫೀಲ್ಡ್ಗೆ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಸಿದ್ಧತೆಯ ಭಾಗವಾಗಿ ಕೆಲವರು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ರೆ, ಇನ್ನುಳಿದ ಆಟಗಾರರು ಪ್ರತ್ಯೇಕವಾಗಿ ಅಭ್ಯಾಸ ಆರಂಭಿಸಿದ್ದಾರೆ.
ಮುಂಬರುವ ಟೆಸ್ಟ್ ಸೀಸನ್ಗೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ದುಲೀಪ್ ಟ್ರೋಫಿಯಿಂದ ಹೊರಗುಳಿದಿರುವ ರೋಹಿತ್, ಮುಂಬೈನಲ್ಲಿ ಪ್ರತ್ಯೇಕವಾಗಿ ಅಭ್ಯಾಸ ಆರಂಭಿಸಿದ್ದಾರೆ. ರೋಹಿತ್ ಅಭ್ಯಾಸವನ್ನ ಟೀಮ್ ಇಂಡಿಯಾ ಅಸಿಸ್ಟೆಂಟ್ ಕೋಚ್ ಅಭಿಶೇಕ್ ನಾಯರ್ ಮಾನಿಟರ್ ಮಾಡ್ತಿದ್ದಾರೆ.
ರೋಹಿತ್ ಶರ್ಮಾ ಮಾತ್ರವಲ್ಲ.. ಯಂಗ್ಸ್ಟರ್ಗಳಾದ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಕೂಡ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ.
ಮುಂಬರುವ ಟೆಸ್ಟ್ ಸೀಸನ್ಗೆ ಟೀಮ್ ಇಂಡಿಯಾ ವಲಯದಲ್ಲಿ ಸಿದ್ಧತೆ ಜೋರಾಗಿ ನಡೀತಾಯಿದೆ. ಆದ್ರೆ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಕಾಣೆಯಾಗಿದ್ದಾರೆ. ಶ್ರೀಲಂಕಾ ಪ್ರವಾಸದ ಏಕದಿನ ಸರಣಿಗಾಗಿ ಲಂಡನ್ನಿಂದ ನೇರವಾಗಿ ಕೊಲಂಬೋಗೆ ಬಂದಿಳಿದಿದ್ದ ಕೊಹ್ಲಿ, ಸರಣಿ ಅಂತ್ಯದ ಬಳಿಕ ಮತ್ತೆ ಲಂಡನ್ಗೆ ಹಾರಿದ್ರು. ಇದೀಗ ಟೆಸ್ಟ್ ಸೀಸನ್ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಕೊಹ್ಲಿಯ ಸುದ್ದಿಯೇ ಇಲ್ಲ.
ಮುಂಬರೋ ಬಾಂಗ್ಲಾ ಎದುರಿನ ಟೆಸ್ಟ್ ಸರಣಿಗೆ ಇನ್ನು 2 ವಾರಗಳಷ್ಟೇ ಬಾಕಿ ಉಳಿದಿವೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಫ್ಲಾಪ್ ಶೋ ನೀಡಿ ಮತ್ತೆ ಲಂಡನ್ಗೆ ತೆರಳಿರೋ ಕೊಹ್ಲಿ, ಬ್ಯಾಟ್ ಮುಟ್ಟಿ ಹತ್ತಿರ ಹತ್ತಿರ ಒಂದು ತಿಂಗಳೇ ಆಗ್ತಾ ಬಂತು. ಸುದೀರ್ಘ ದಿನಗಳ ಕಾಲ ಮೈದಾನದಿಂದ ಹೊರಗುಳಿಯೋ ಕೊಹ್ಲಿ ಅಭ್ಯಾಸದ ಅಖಾಡಕ್ಕೇ ಇಳಿದಿಲ್ಲ. ಕೊಹ್ಲಿಯ ಈ ನಡೆ ಟೀಮ್ ಇಂಡಿಯಾಗೆ ಹಿನ್ನಡೆಯಾಗೋ ಸಾಧ್ಯತೆ ದಟ್ಟವಾಗಿದೆ.