ಚಂಡೀಗಡ:- ಕೋರ್ಟ್ನಲ್ಲೇ ಮಗಳ ಗಂಡನನ್ನು ಮಾಜಿ ಪೊಲೀಸ್ ಅಧಿಕಾರಿ ಗುಂಡಿಕ್ಕಿ ಕೊಂದ ಘಟನೆ ಜರುಗಿದೆ. ಮೃತರನ್ನು ಹರ್ಪ್ರೀತ್ ಸಿಂಗ್ ಎಂದು ಗುರುತಿಸಿದರೆ, ಕೊಲೆ ಆರೋಪಿಯನ್ನು ಮಾಲ್ವಿಂದರ್ ಸಿಂಗ್ ಸಿಧು ಎಂಬುದಾಗಿ ಗುರುತಿಸಲಾಗಿದೆ. ಮಾಲ್ವಿಂದರ್ ಸಿಂಗ್ಗೆ ಹರ್ಪ್ರೀತ್ ಸಿಂಗ್ ಅಳಿಯ ಆಗಬೇಕು ಎಂಬ ಸಂಗತಿಯು ಬಳಿಕ ಬಯಲಾಗಿದೆ.
ಯಾದಗಿರಿ ಪಿಎಸ್ಐ ಸಾವು ಪ್ರಕರಣದ ತನಿಖೆ CID ಹೆಗಲಿಗೆ: ರಾಜ್ಯ ಸರ್ಕಾರದ ಆದೇಶ!
ಮಾಲ್ವಿಂದರ್ ಸಿಂಗ್ ಹಾಗೂ ಹರ್ಪ್ರೀತ್ ಸಿಂಗ್ ಮಧ್ಯೆ ಕೌಟುಂಬಿಕ ಸಮಸ್ಯೆ, ಕಂದಕ ಉಂಟಾಗಿತ್ತು. ಹಾಗಾಗಿ, ಅವರು ನ್ಯಾಯಾಲಯ ಮೆಟ್ಟಿಲೇರಿದ್ದರು. ಹಾಗಾಗಿ, ಇಬ್ಬರೂ ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ್ದರು. ಇದೇ ವೇಳೆ ಇಬ್ಬರ ಮಧ್ಯೆ ಮಧ್ಯಸ್ಥಿಕೆ ಪ್ರಕ್ರಿಯೆ ನಡೆಯುತ್ತಿತ್ತು. ಆಗ, ಮಾಲ್ವಿಂದರ್ ಸಿಂಗ್, ಶೌಚಾಲಯಕ್ಕೆ ಹೋಗಿಬರುತ್ತೇನೆ ಎಂದು ಕೋಣೆಯಿಂದ ಹೊರಬಂದರು. ಇದೇ ವೇಳೆ ಮಾವನಿಗೆ ದಾರಿ ತೋರಿಸುತ್ತೇನೆ ಎಂದು ಹರ್ಪ್ರೀತ್ ಸಿಂಗ್ ಕೂಡ ಹೊರಬಂದರು. ಇದಾದ ಬಳಿಕ ಐದು ಬಾರಿ ಗುಂಡು ಹಾರಿಸಿದ ಸದ್ದು ಕೇಳಿದ ಕಾರಣ ಇಡೀ ಕೋರ್ಟ್ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು
ಮಾಲ್ವಿಂದರ್ ಸಿಂಗ್ ಅಳಿಯನಿಗೇ ಐದು ಬಾರಿ ಗುಂಡು ಹಾರಿಸಿದ್ದಾರೆ. ಐದರ ಪೈಕಿ ಎರಡು ಗುಂಡುಗಳು ಹರ್ಪ್ರೀತ್ ಸಿಂಗ್ಗೆ ತಗುಲಿವೆ. ಹರ್ಪ್ರೀತ್ ಸಿಂಗ್ ಕೋರ್ಟ್ನಲ್ಲಿ ಕೆಳಗೆ ಬಿದ್ದಿರುವ ವಿಡಿಯೊ ಲಭ್ಯವಾಗಿದೆ. “ಅವರಿಗೆ ಗುಂಡು ತಗುಲಿದೆ. ಯಾರಾದರೂ ಆಸ್ಪತ್ರೆಗೆ ಕರೆದುಕೊಂಡು ನಡೆಯಿರಿ” ಎಂದು ವ್ಯಕ್ತಿಯೊಬ್ಬ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಬಳಿಕ ಹರ್ಪ್ರೀತ್ ಸಿಂಗ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಮಾರ್ಗ ಮಧ್ಯೆಯೇ ಅಧಿಕಾರಿ ಮೃತಪಟ್ಟರು ಎಂದು ತಿಳಿದುಬಂದಿದೆ