ಜನಪ್ರಿಯ ಕ್ರಿಕೆಟ್ ಟೂರ್ನಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾಲ್ಗೊಳ್ಳುವ ವಿದೇಶಿ ಆಟಗಾರರಿಗೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಕಠಿಣ ನಿಯವೊಂದನ್ನು ಜಾರಿಗೆ ತರಲು ಮುಂದಾಗಿದೆ.
ಪ್ರತಿನಿತ್ಯ ಬೆಳಿಗ್ಗೆ ಈ ಲಕ್ಷಣಗಳು ಕಾಣ್ತಿದ್ಯಾ!?: ನಿರ್ಲಕ್ಷ್ಯ ಬೇಡ, ಇದು 100% ಕಿಡ್ನಿ ಪ್ರಾಬ್ಲಮ್ !
18ನೇ ಆವೃತ್ತಿಯ ಮೆಗಾ ಹರಾಜಿನ ಕುರಿತು ನಡೆದ ಸಭೆಯಲ್ಲಿ ಕೆಲವು ಫ್ರಾಂಚೇಸಿಗಳು ಬಿಸಿಸಿಐಗೆ ವಿಶೇಷ ಬೇಡಿಕೆಗಳನ್ನು ಮುಂದಿರಿಸಿತ್ತು. ಇದೇ ವೇಳೆ ಹರಾಜಿನಲ್ಲಿ ಖರೀದಿಸಿದ ವಿದೇಶಿ ಆಟಗಾರ ಅನಗತ್ಯ ಕಾರಣ ನೀಡಿ ತಂಡದ ಪರ ಆಡದೇ ಅರ್ಧದಲ್ಲೇ ಕೈಕೊಟ್ಟರೆ ಇಂತಹ ವಿದೇಶೀ ಆಟಗಾರರಿಗೆ 2 ವರ್ಷ ನಿಷೇಧ ವಿಧಿಸುವಂತೆ ಬಿಸಿಸಿಐಗೆ ಒತ್ತಡ ಹೇರಿವೆ ಎಂದು ವರದಿಯಾಗಿದೆ.
ಇತ್ತೀಚಿಗೆ ಮುಂಬೈನಲ್ಲಿ ನಡೆದ ಬಿಸಿಸಿಐ ಮತ್ತು ಪ್ರಾಂಚೈಸಿಗಳ ನಡುವಿನ ಸಭೆಯಲ್ಲಿ, ಆಟಗಾರರ ಉಳಿಸಿಕೊಳ್ಳುವಿಕೆಯಿಂದ ಹಿಡಿದು ಮೆಗಾ ಹರಾಜಿನ ನಿಯಮಗಳವರೆಗೆ ಚರ್ಚೆಯಾಗಿದೆ.
ಅದರಂತೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡು ಆ ಬಳಿಕ ಹಿಂದೆ ಸರಿಯುವ ವಿದೇಶಿ ಆಟಗಾರರ ಮೇಲೆ ಎರಡು ವರ್ಷಗಳ ನಿಷೇಧ ಹೇರಬೇಕೆಂದು ಕೆಲ ಫ್ರಾಂಚೈಸಿಗಳು ಪ್ರಸ್ತಾಪಿಸಿವೆ. ಇದಕ್ಕೆ ಮುಖ್ಯ ಕಾರಣ, ಕೆಲ ಆಟಗಾರರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇದೀಗ ಐಪಿಎಲ್ ಫ್ರಾಂಚೈಸಿಗಳು ಆಗ್ರಹಿಸಿದೆ
ಅದರಂತೆ ಇದೀಗ ಗಾಯದ ಹೊರತಾಗಿ ಯಾವುದೇ ವಿದೇಶಿ ಆಟಗಾರ ಐಪಿಎಲ್ನಿಂದ ಹಿಂದೆ ಸರಿದರೆ, ಅಂತಹ ಆಟಗಾರರನ್ನು 2 ವರ್ಷಗಳವರೆಗೆ ಬ್ಯಾನ್ ಮಾಡುವಂತೆ ತಿಳಿಸಲಾಗಿದೆ. ಈ ನಿಯಮವು ಈ ಬಾರಿಯ ಮೆಗಾ ಹರಾಜಿನ ವೇಳೆ ಜಾರಿಯಾಗುವ ಸಾಧ್ಯತೆಯಿದೆ.
ಐಪಿಎಲ್ 2022, 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಜೇಸನ್ ರಾಯ್ ಟೂರ್ನಿ ಆರಂಭಕ್ಕೂ ಕೆಲ ದಿನಗಳಿರುವಾಗ ಹಿಂದೆ ಸರಿದ್ದರು. ಹಾಗೆಯೇ ವನಿಂದು ಹಸರಂಗ (SRH), ಹ್ಯಾರಿ ಬ್ರೂಕ್ (DC), ಡೇವಿಡ್ ವಿಲ್ಲಿ (ಎಲ್ಎಸ್ಜಿ), ಗಸ್ ಅಟ್ಕಿಸನ್ (KKR), ಮಾರ್ಕ್ ವುಡ್ (LSG) ಸೇರಿದಂತೆ ಕೆಲ ಆಟಗಾರರು ಕಳೆದ ಸೀಸನ್ನಲ್ಲಿ ಕೈಕೊಟ್ಟಿದ್ದರು.
ನಾವು ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತೇವೆ. ಹೀಗೆ ಯೋಜನೆಯೊಂದಿಗೆ ಖರೀದಿಸಿದ ಆಟಗಾರರು ಕೊನೆಯ ಕ್ಷಣದಲ್ಲಿ ಕೈ ಕೊಡುವುದರಿಂದ ಅದು ತಂಡದ ಸಮತೋಲನ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಹೀಗಾಗಿ ಐಪಿಎಲ್ಗೆ ಆಯ್ಕೆಯಾಗಿ ವಿನಾಕಾರಣ ಹಿಂದೆ ಸರಿಯುವ ಆಟಗಾರರ ಮೇಲೆ ಕೆಲ ವರ್ಷಗಳವರೆಗೆ ನಿಷೇಧ ಹೇರಬೇಕೆಂದು ಫ್ರಾಂಚೈಸಿಗಳು ಆಗ್ರಹಿಸಿದೆ
ಐಪಿಎಲ್ ಫ್ರಾಂಚೈಸಿಗಳ ಈ ಮನವಿಗೆ ಬಿಸಿಸಿಐ ಕಡೆಯಿಂದಲೂ ಸಕರಾತ್ಮಕ ಸ್ಪಂದನೆ ದೊರೆತಿದೆ.