ಬೆಂಗಳೂರು:- ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ಡೆಂಘೀ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಈ ನಡುವೆ ಆತಂಕಕಾರಿ ಸುದ್ದಿಯೊಂದು ಬಯಲಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾಗುತ್ತಿರುವ ಬಹುತೇಕ ಡೆಂಘಿ ಕೇಸ್ ಗಳು ನಗರದ ಅಪಾರ್ಟ್ಮೆಂಟ್ ಗಳಲ್ಲೇ ದಾಖಲಾಗುತ್ತಿದೆಯಂತೆ. ಈ ಮೂಲಕ ಸಮುದಾಯುಕ್ಕೆ ಡೆಂಘಿ ಹರಡಿರುವ ಬಗ್ಗೆ ಪಾಲಿಕೆ ಆತಂಕ ವ್ಯಕ್ತಪಡಿಸಿದೆ.
Weight Loss: ವರ್ಕೌಟ್ ಮಾಡೋಕೆ ಮೂಡ್ ಬರಲ್ವಾ!?, ಚಿಂತೆ ಬಿಡಿ ತೂಕ ಹೀಗೆ ಇಳಿಸಿಕೊಳ್ಳಬಹುದು!
ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳ ಬೆಂಗಳೂರಲ್ಲಿ ದಾಖಲಾಗುತ್ತಿದೆ. ಡೆಂಘಿಗೆ ಬೆಂಗಳೂರು ಹಾಟ್ ಸ್ಪಾಟ್ ಆಗ್ತಿದೆ. ಸದ್ಯ ಬೆಂಗಳೂರಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಡೆಂಘಿ ಕೇಸ್ ಗಳಿವೆ. ಈವರೆಗೆ ಬೆಂಗಳೂರಲ್ಲಿ ಒಟ್ಟು ಮೂವರು ಡೆಂಘಿ ಬಾಧಿಸಿ ಸಾವನ್ನಪ್ಪಿರುವ ಬಗ್ಗೆ ಪಾಲಿಕೆ ಖಚಿತ ಪಡಿಸಿದೆ. ಇದರ ನಡುವೆ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಬೆಂಗಳೂರಿಗರನ್ನು ಆತಂಕಕ್ಕೆ ದೂಡಿದೆ. ಡೆಂಘಿ ಜಾಗೃತಿ ಹಾಗೂ ಲಾರ್ವ ನಾಶಕ್ಕಾಗಿ ಪಾಲಿಕೆ ನಡೆಸಿದ್ದ ಮನೆ ಮನೆ ಸರ್ವೇಯಲ್ಲಿ ಇದು ಗೊತ್ತಾಗಿದ್ದು, ಡೆಂಘೀ ನಗರದಲ್ಲಿ ಕಮ್ಯೂನಿಟಿ ಸ್ಪ್ರೆಡ್ ಆಗಿರುವ ಆತಂಕವನ್ನು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ವ್ಯಕ್ತ ಪಡಿಸಿದ್ದಾರೆ.
ಹೌದು, ಬಿಬಿಎಂಪಿಯ ಮನೆಮನೆ ಸರ್ವೇಯಲ್ಲಿ ಆತಂಕಕಾರಿ ಮಾಹಿತಿ ಬಯಲಾಗಿದೆ. ನಗರದಲ್ಲಿ ದಾಖಲಾಗುತ್ತಿರುವ ನೂರು ಪ್ರಕರಣಗಳ ಪೈಕಿ ಎಪತ್ತೈದು ಪ್ರಕರಣಗಳು ಅಪಾರ್ಟ್ಮೆಂಟ್ ಗಳಲ್ಲೇ ದಾಖಲಾಗುತ್ತಿದೆಯಂತೆ. ಸ್ಲಂ ಪ್ರದೇಶಗಳಿಗಿಂತ ಹೆಚ್ಚಿನ ಪ್ರಕರಣಗಳು ಬಹು ಐಷಾರಾಮಿ ಅಪಾರ್ಟ್ಮೆಂಟ್ ಗಳಲ್ಲೇ ಪತ್ತೆಯಾಗುತ್ತಿದೆ. ಬಾನೆತ್ತರದ ಕಟ್ಟಡಗಳೇ ಡೆಂಘಿ ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ಆಯ್ದುಕೊಳ್ಳುತ್ತಿದೆ ಎಂದು ಪಾಲಿಕೆ ಸರ್ವೇಯಲ್ಲಿ ಗೊತ್ತಾಗಿದೆ. ಸದ್ಯ ಬೆಂಗಳೂರಲ್ಲಿ ದಾಖಲಾಗಿರುವ 4,300ಕ್ಕೂ ಅಧಿಕ ಡೆಂಘಿ ಕೇಸ್ ಗಳ ಪೈಕಿ 75% ನಷ್ಟು ಪ್ರಕರಣಗಳು ಅಪಾರ್ಟ್ಮೆಂಟ್ ನಿವಾಸಿಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಪಾರ್ಟ್ ಮೆಂಟ್ ಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಮುಂದಾಗ್ತಿದೆ ಬಿಬಿಎಂಪಿ.
ಇದು ಬೆಂಗಳೂರಲ್ಲಿ ಡೆಡ್ಲಿ ಡೆಂಘಿ ಜ್ವರ ಸಮುದಾಯಕ್ಕೆ ಹರಡಿದ್ಯಾ ಎನ್ನುವ ಆತಂಕ ಮೂಡಿಸಿದೆ. ಕೊಳಗೇರಿ ಪ್ರದೇಶಗಳಿಗಿಂತ ಬಾನೆತ್ತರದ ಕಟ್ಟಡಗಳಿರುವ ಅಪಾರ್ಟ್ಮೆಂಟ್ ಗಳಲ್ಲೇ ಹೆಚ್ಚಿದೆ ಡೆಂಘಿ ಜ್ವರ ಪತ್ತೆಯಾಗ್ತಿದೆ. ಆದರೆ ಇದರಿಂದ ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ವೈದ್ಯರು. ಡೆಂಘಿ ಒಂದು ಸಾಂಕ್ರಾಮಿಕ ಸೋಂಕಲ್ಲ. ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ ಅಪಾರ್ಟ್ ಮೆಂಟ್ ಗಳಲ್ಲಿ ನೀರು ನಿಲ್ಲುವ ಜಾಗದಲ್ಲಿ ಲಾರ್ವ ಉತ್ಪತ್ತಿಕೊಂಡು ಡೆಂಘಿ ಏರಿಕೆ ಆಗುತ್ತಿದೆ. ಜನರು ಎಚ್ಚರಿಕೆವಹಿಸುವುದೊಂದೇ ಇದನ್ನು ತಡೆಗಟ್ಟಲು ಮಾರ್ಗ ಎನ್ನುತ್ತಿದ್ದಾರೆ ವೈದ್ಯರು.
ಸದ್ಯ ಬೆಂಗಳೂರು ನಗರದಲ್ಲಿ ಬರೋಬ್ಬರಿ 17 ಲಕ್ಷ ಮನೆ ಮನೆಗೆ ತೆರಳಿ ಪಾಲಿಕೆ ಸಿಬ್ಬಂದಿಗಳು ಸರ್ವೇ ನಡೆಸಿದ್ದಾರೆ. ಅಲ್ಲದೆ ಬರೋಬ್ಬರಿ 60 ಸಾವಿರಕ್ಕೂ ಅಧಿಕ ಲಾರ್ವ ಸ್ಪಾಟ್ ಗಳನ್ನೂ ನಾಶ ಮಾಡಿದ್ದಾರೆ. ಅದಾಗಿಯೂ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಡೆಂಘಿ ಕೇಸ್ ಗಳು ಏರಿಕೆಯಾಗುತ್ತಿದೆ. ಫಾಗಿಂಗ್, ಸೊಳ್ಳೆ ಔಷಧಿ ಸಿಂಪಡಣೆಯೂ ಸಮರೋಪಾದಿಯಲ್ಲಿ ನಡೆಯುತ್ತಿದೆ. ಅಷ್ಟಾಗಿಯೂ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಡೆಂಘಿ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.