ನನ್ನ ಅಭಿಮಾನಿಗಳು ತಲೆ ತಗ್ಗಿಸೋ ಕೆಲಸ ಯಾವಾಗಲೂ ಮಾಡಲ್ಲ ಎಂದಿರುವ ಯಶ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.
ನೇಪಾಳ ವಿರುದ್ಧ ರೋಚಕ ಗೆಲುವು ದಾಖಲಿಸಿದ ಕಿವೀಸ್.. ಗೆಲುವಿನ ಖಾತೆ ತೆರೆದ ದಕ್ಷಿಣ ಆಫ್ರಿಕಾ!
ಯಶ್ ಅವರು ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಈ ಕಾರಣಕ್ಕೆ ಅವರು ಮೊದಲಿನಷ್ಟು ಅಭಿಮಾನಿಗಳಿಗೆ ಲಭ್ಯವಿಲ್ಲ. ಹಾಗಂತ ಅವರಿಗೆ ಅಭಿಮಾನಿಗಳ ಮೇಲೆ ಇರೋ ಗೌರವ, ಪ್ರೀತಿ ಕಡಿಮೆ ಆಗಿಲ್ಲ. ಯಾರಾದರೂ ಅಭಿಮಾನಿಗಳು ಸಿಕ್ಕರೆ ಯಶ್ ಪ್ರೀತಿಯಿಂದ ಫೋಟೋಗೆ ಪೋಸ್ ಕೊಡುತ್ತಾರೆ. ತಪ್ಪು ಮಾಡಿದಾಗ ತಿದ್ದಿ ಹೇಳುತ್ತಾರೆ. ಯಶ್ ಎಲ್ಲರಿಗೂ ಮಾದರಿ ಎಂದು ಫ್ಯಾನ್ಸ್ ಹೇಳಿಕೊಳ್ಳುತ್ತಿದ್ದಾರೆ.
ನನ್ನ ಫೇವರಿಟ್ ಹೀರೋ ಯಶ್ ಎಂದು ಅನೇಕರು ಹೇಳುತ್ತಾರೆ. ಅವರು ಯಾವಾಗಲೂ ತಲೆ ತಗ್ಗಿಸಬಾರದು’ ಎಂದು ಯಶ್ ಈ ಮೊದಲು ಹೇಳಿದ್ದರು. ‘ನೀವು ತಲೆ ತಗ್ಗಿಸೋ ಕೆಲಸ ಯಾವಾಗಲೂ ಮಾಡಲ್ಲ. ಯಶ್ ಅಭಿಮಾನಿಗಳು ಎಂದರೆ ತಲೆ ಎತ್ತಿಕೊಂಡು ಓಡಾಡಬೇಕು. ಹಾಗೆ ಬದುಕುತ್ತೇನೆ’ ಎಂದು ಯಶ್ ಈ ಮೊದಲು ಭರವಸೆ ನೀಡಿದ್ದರು. ಈ ಭರವಸೆಯನ್ನು ಅವರು ಉಳಿಸಿಕೊಂಡು ಹೋಗುತ್ತಿದ್ದಾರೆ.
ಇನ್ನು, ಸ್ಟಾರ್ಸ್ ವಾರ್ ವಿಚಾರದಲ್ಲೂ ದರ್ಶನ್ ಹಾಗೂ ಯಶ್ ಹೇಳಿಕೆಯನ್ನು ಹೋಲಿಕೆ ಮಾಡಲಾಗುತ್ತಿದೆ. ‘ಸ್ಟಾರ್ವಾರ್ ಎಂದರೆ ಎರಡು ಕೈ ಸೇರಿದರೆ ಮಾತ್ರ ಆಗೋದು’ ಎಂದು ದರ್ಶನ್ ಹೇಳಿದ್ದರು. ಆದರೆ, ಯಶ್ ಅವರು ಈ ವಿಚಾರದಲ್ಲಿ ನೀಡಿದ ಹೇಳಿಕೆ ಗಮನ ಸೆಳೆದಿತ್ತು. ‘ಮತ್ತೋರ್ವ ಹೀರೋಗೆ ಬಯ್ಯಬಾರದು. ನನ್ನ ಫ್ಯಾನ್ ಆಗಿ ಅವರು ಆ ರೀತಿ ಮಾಡುತ್ತಾರೆ ಎಂದರೆ ಅವುರ ನನ್ನ ಅಭಿಮಾನಿಯೇ ಅಲ್ಲ’ ಎಂದು ಯಶ್ ನೇರ ಮಾತುಗಳಲ್ಲಿ ಹೇಳಿದ್ದರು.