ಕಂಪ್ಲಿ ತಾಲೂಕಿನ ಎಮ್ಮಿಗನೂರು ಶ್ರೀ ವೆಂಕಯ್ಯ ಮೆಮೋರಿಯಲ್ ಪ್ರೌಢಶಾಲೆ ಉತ್ತಮ ಸಾಧನೆಯೊಂದಿಗೆ ಹತ್ತನೇ ತರಗತಿಯಲ್ಲಿ ಶೇಕಡಾ 100% ಫಲಿತಾಂಶ ಪಡೆದಿದೆ. ಪ್ರಸಕ್ತ ಶೈಕ್ಷಣಿಕ 2023-24ನೇ ಸಾಲಿನ 10ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಎಮ್ಮಿಗನೂರು ಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಶ್ರೀ ವೆಂಕಯ್ಯ ಮೆಮೋರಿಯಲ್ ಪ್ರೌಢಶಾಲೆ ಶೇಕಡಾ 100 ರಷ್ಟು ಫಲಿತಾಂಶದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಶೈಕ್ಷಣಿಕ ವರ್ಷದಲ್ಲಿ ಶ್ರೀ ವೆಂಕಯ್ಯ ಮೆಮೋರಿಯಲ್ ಪ್ರೌಢಶಾಲೆ ಉತ್ತಮ ಸಾಧನೆ ಮಾಡಿ ಹತ್ತನೇ ತರಗತಿಯಲ್ಲಿ ಸತತ 5ನೇ ವರ್ಷವೂ ಕೂಡ ನೂರಕ್ಕೆ ನೂರರಷ್ಟು ಪಲಿತಾಂಶವನ್ನು ಪಡೆದುಕೊಂಡಿದೆ.
ಎಮ್ಮಿಗನೂರು ಗ್ರಾಮೀಣ ಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಶ್ರೀ ವೆಂಕಯ್ಯ ಮೆಮೋರಿಯಲ್ ಪ್ರೌಢಶಾಲೆ ಶೇಕಡಾ 100 ರಷ್ಟ್ರ ಫಲಿತಾಂಶ ದಾಖಲಿಸುವ ಮೂಲಕ ಈ ವರ್ಷದಲ್ಲೇ ದಾಖಲೆ ಬರೆದಿದೆ. ಶ್ರೀ ವೆಂಕಯ್ಯ ಮೆಮೋರಿಯಲ್ ಪ್ರೌಢಶಾಲೆ, 10 ನೇ ತರಗತಿಯ ಒಟ್ಟು 40 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಶೇಕಡಾ 100 ಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿದೆ.
ಇದರಲ್ಲಿ ಪ್ರಥಮ ಸ್ಥಾನ * ಜಿ ಕೀರ್ತಿ 614 (625) 98.24% (ಎಮ್ಮಿಗನೂರು)
ದ್ವಿತೀಯ ಸ್ಥಾನ * ಭೂಮಿಕಾ 593 (625) 94.8% (ಎಮ್ಮಿಗನೂರು)
ತೃತೀಯ ಸ್ಥಾನ * ಎಚ್ ಖಾದರ್ ಭಾಷಾ 589(625) 94.16%(ಎಮ್ಮಿಗನೂರು)
ಚತುರ್ಥ ಸ್ಥಾನ ಎಚ್ ವಿರುಪಾಕ್ಷಿ ಗೌಡ 589(625)94.16% (ಎಮ್ಮಿಗನೂರು).
ಬಿ. ರಿತು ಶ್ರೀ 589 (625)94.16%.(ಎಮ್ಮಿಗನೂರು)
ಐದನೇ ಸ್ಥಾನ ಪಡೆಯುವುದರ ಮೂಲಕ ಶ್ರೀ ವೆಂಕಯ್ಯ ಮೆಮೋರಿಯಲ್ ಪ್ರೌಢಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ವಿದ್ಯೆ ಸಂಸ್ಥೆ (ರಿ) ಶ ಕಾರ್ಯದರ್ಶಿ *ಶ್ರೀಯುತ ಎ ಸುನಿತಾ ಹಾಗೂ ಸಂಸ್ಥಾಪಕರು ಎ ತಾಂಡವ ಕೃಷ್ಣಮತ್ತು ಮುಖ್ಯ ಗುರುಗಳು ಕೆ ಹೆಚ್ ರಾಮಪ್ಪ. ಸಂತಸ ಹಂಚಿಕೊಂಡಿದ್ದು,
ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಹಾಗೂ ಮೌಲ್ಯಯುತ ಶಿಕ್ಷಣವನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಯಶಸ್ಸು ಸಿಕ್ಕಿರುವುದು ಬಹಳ ಸಂತೋಷ ನೀಡಿದೆ. ಶೇಕಡಾ 100 ರಷ್ಟು ಫಲಿತಾಂಶ ಗಳಿಸುವಲ್ಲಿ ಹಗಲಿರುಳು ಶ್ರಮಿಸಿದ ವಿದ್ಯಾರ್ಥಿಗಳಿಗೆ, ಪ್ರಾಂಶುಪಾಲರಿಗೂ, ಎಲ್ಲಾ ಭೋದಕ ಮತ್ತು ಸಿಬ್ಬಂದಿ ವೃಂದದವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಸಾರ್ ಶಿಕ್ಷಕರು ಸಿಬ್ಬಂದಿ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು