ಇಂದು ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರ್ ಸಿಬಿ ಬ್ಯಾಟಿಂಗ್ ಮಾಡಲಿದೆ.
ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯ ಎಚ್ಚರಿಕೆ: ಹವಮಾನ ಇಲಾಖೆಯಿಂದ ಎಚ್ಚರಿಕೆ..!
ಇಂದಿನ ಪಂದ್ಯದಲ್ಲಿ ಸೋತ ತಂಡವೂ ಹೊರಬೀಳಲಿದೆ. ಸೋತ ತಂಡದ ಬಳಿ 12 ಪಂದ್ಯಗಳಿಂದ ಎಂಟು ಅಂಕ ಮಾತ್ರ ಉಳಿದಿರುತ್ತದೆ. ಈ ತಂಎ ಗರಿಷ್ಠ 12 ಅಂಕ ಮಾತ್ರ ಸಂಪಾಧಿಸಬಹುದು. ಇದು ಪ್ಲೇ ಆಫ್ಗೆ ಅರ್ಹತೆ ಪಡೆಯಲು ಸಾಕಾಗುವುದಿಲ್ಲ. ಇನ್ನ ಈ ಪಂದ್ಯದಲ್ಲಿ ಗೆಲ್ಲುವ ತಂಡದ ಭರವಸೆ ಜೀವಂತವಾಗಿರುತ್ತದೆ. ಆದಾಗ್ಯೂ, ಆ ತಂಡ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ
ಇಂದು, ಐಪಿಎಲ್ 2024 ರ 58 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದು ಸೋತ ತಂಡದ ಪಯಣ ಇಲ್ಲಿಗೆ ಮುಕ್ತಾಯವಾಗಲಿದೆ. ಪ್ರಸ್ತುತ ಎರಡೂ ತಂಡಗಳು ತಲಾ ಎಂಟು ಅಂಕಗಳನ್ನು ಹೊಂದಿವೆ.