ನವದೆಹಲಿ:- ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಜರುಗಿದೆ. ಈ ಹಿನ್ನೆಲೆ ಹರಿಯಾಣ ಮೂಲದ ಕರ್ನಾಲ್ನ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ.
Parameshwar: ಇದುವರೆಗೂ ಪ್ರಜ್ವಲ್ ಎಲ್ಲಿದ್ದಾರೆ ಎಂಬುವುದು ಗೊತ್ತಿಲ್ಲ -ಪರಮೇಶ್ವರ್!
ಹತ್ಯೆಗೀಡಾದ ಕರ್ನಾಲ್ ಮೂಲದ ವಿದ್ಯಾರ್ಥಿ ಆಸ್ಟ್ರೇಲಿಯಾದಲ್ಲಿ ಎಂಟೆಕ್ ಪದವಿ ಓದುತ್ತಿದ್ದರು. ವಿಕ್ಟೋರಿಯಾ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯ ನಂತರ ಮಂಗಳವಾರ ಬೆಳಿಗ್ಗೆ ಗೌಲ್ಬರ್ನ್ನಲ್ಲಿ ಅಭಿಜಿತ್ (26) ಮತ್ತು ರಾಬಿನ್ ಗಾರ್ಟನ್ (27) ಎಂಬ ಇಬ್ಬರನ್ನು ಬಂಧಿಸಲಾಗಿದೆ. ದಿ ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಕೊಲೆ ಮಾಡಿರುವ ಸಹೋದರರು ಕರ್ನಾಲ್ನ ಬಸ್ತಾರಾ ಗ್ರಾಮದ ನಿವಾಸಿಗಳಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದೊಯ್ಯಲಾಗಿದೆ. ಬಳಿಕ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ
ಮೆಲ್ಬೋರ್ನ್ನ ಆಗ್ನೇಯದಲ್ಲಿರುವ ಓರ್ಮಂಡ್ ಮನೆಯಲ್ಲಿ 22 ವರ್ಷದ ನವಜೀತ್ ಸಂಧು ಮತ್ತು 30 ವರ್ಷದ ಶರ್ವನ್ ಕುಮಾರ್ ಇಬ್ಬರೂ ವಾಸವಾಗಿದ್ದರು. ಅವರ ಮೇಲೆ ದಾಳಿ ಮಾಡಿದ ಸಹೋದರರಿಬ್ಬರು ಅಲ್ಲಿಂದ ಪರಾರಿಯಾಗಿದ್ದರು. ಭಾನುವಾರದಿಂದ ಅವರು ನಾಪತ್ತೆಯಾಗಿದ್ದರು. ಈ ದಾಳಿಯಲ್ಲಿ ಒಬ್ಬಾತ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.