ಕೋಲಾರ: 56 ಇಂಚಿನ ಎದೆ ಇರುವ ಪ್ರಧಾನಿ ಮೋದಿ (PM Modi) ಅವರು ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣದ ಬಗ್ಗೆ ಮಾತನಾಡಲಿಲ್ಲ. ಈಗ ಮಹಿಳೆಯರ ಪರ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ವಾಗ್ದಾಳಿ ನಡೆಸಿದ್ದಾರೆ.
ಕೋಲಾರದ (Kolar) ಮಾಲೂರಿನ ಚೊಕ್ಕಂಡನಹಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ತನ್ನ ಪ್ರಣಾಳಿಕೆಯಲ್ಲಿ 10 ವರ್ಷದ ಸಾಧನೆ ಹೇಳೋಕಾಗಿಲ್ಲ. ಉದ್ಯೋಗ ನೀಡಿದ ಬಗ್ಗೆ ಹೇಳಿಲ್ಲ. ದೇಶಕ್ಕೆ ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಹೇಳಿಕೊಂಡಿಲ್ಲ. ಹಿಂದೆ ನೀಡಿದ್ದ ಭರವಸೆಗಳನ್ನ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮಗೆ ಈರುಳ್ಳಿ ಕತ್ತರಿಸಿ ಫ್ರಿಡ್ಜ್ʼನಲ್ಲಿ ಇಡೋ ಅಭ್ಯಾಸವಿದೆಯಾ?! ಇದೆಷ್ಟು ಡೇಂಜರ್ ಗೊತ್ತಾ ?
ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ನಡೆಯಿತು. ಆದ್ರೆ ಆ ಪ್ರಕರಣದ ಬಗ್ಗೆ ಒಂದು ಮಾತನಾಡದ 56 ಇಂಚಿನ ಎದೆ ಇರುವ ಪ್ರಧಾನಿ, ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ಎಂದರಲ್ಲದೇ 400 ಸೀಟ್ ಬೇಕಾದರೆ, ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.