SRH ವಿರುದ್ಧದ ಸೋಲಿನ ಬಳಿಕ ಆರ್ಸಿಬಿ ನಾಯಕ ಬೇಸರದ ಮಾತುಗಳನ್ನಾಡಿದ್ದಾರೆ. ಆರ್ಸಿಬಿ ಆರನೇ ಸೋಲಿನ ಬಳಿಕ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಅವರು ಮಾತನಾಡಿದ್ದಾರೆ. ಈ ಪಂದ್ಯವನ್ನು ನಾವು ಗೆಲ್ಲಬಹುದಿತ್ತು ಎಂದು ಅವರು ಹೇಳಿದ್ದಾರೆ
Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಏಪ್ರಿಲ್ 18 ರಿಂದ ಭಾರೀ ಮಳೆ!
ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಪಿಚ್ ಹಾಗೂ ಆರ್ಸಿಬಿ ಬೌಲರ್ಗಳ ಕಳಪೆ ಪ್ರದರ್ಶನದಿಂದ ಹೈದರಾಬಾದ್ ತಂಡ 287 ರನ್ ಕಲೆ ಹಾಕಿತು. ಹೆಡ್ 41 ಬೌಲ್ಗೆ 101 ರನ್ ಕಲೆ ಹಾಕಿದರು. ಅಬ್ದುಲ್ ಸಮಾದ್ ಹಾಗೂ ಮಕ್ರಮ್ ಅನುಕ್ರವಾಗಿ 37 ರನ್ ಹಾಗೂ 32 ರನ್ ಬಾರಿಸಿದರು. ಕ್ಲಾಸನ್ 31 ಬೌಲ್ಗೆ 67 ರನ್ ಸಿಡಿಸಿದರು. ಇದನ್ನು ಬೆನ್ನು ಹತ್ತಿದ ಆರ್ಸಿಬಿ ಉತ್ತಮ ಆರಂಭ ಕಂಡಿತು. ವಿರಾಟ್ ಕೊಹ್ಲಿ 20 ಬೌಲ್ಗೆ 42 ರನ್ ಸಿಡಿಸಿದರು. ಫಾಪ್ 28 ಬೌಲ್ಗೆ 62 ರನ್ ಬಾರಿಸಿದರು. ಕಾರ್ತಿಕ್ 35 ಬೌಲ್ಗೆ 83 ಸಿಡಿಸಿ ತಂಡಕ್ಕೆ ಆಸರೆ ಆದರು.
‘ನಮ್ಮಿಂದ ಉತ್ತಮ ಪ್ರದರ್ಶನ ಸಿಕ್ಕಿದೆ. 280 ಅನ್ನೋದು ದೊಡ್ಡ ಮೊತ್ತ. ಅದರ ಸಮೀಪ ಹೋಗಲು ಪ್ರಯತ್ನಿಸಿದೆವು. ಇಲ್ಲಿ ನಮ್ಮ ವೇಗಿಗಳು ಬೌಲ್ ಮಾಡಲು ಕಷ್ಟಪಟ್ಟರು. ಬ್ಯಾಟಿಂಗ್ ಕ್ಷೇತ್ರದಲ್ಲೂ ನಾವು ಕೆಲವು ಕಡೆ ಇನ್ನಷ್ಟು ಶ್ರಮ ಹಾಕಬೇಕಿದೆ. ಪವರ್ಪ್ಲೇ ಬಳಿಕವೂ ರನ್ರೇಟ್ ಕಡಿಮೆ ಆಗದಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ ಫಾಪ್.
ನಮ್ಮ ಬಾಯ್ಸ್ ಕೈ ಜೋಡಿಸಿದರು ಮತ್ತು ಬಿಟ್ಟುಕೊಡಲಿಲ್ಲ. ಫೈಟ್ ನೋಡಲು ಖುಷಿ ಆಯಿತು. ಬೌಲಿಂಗ್ ದೃಷ್ಟಿಯಿಂದ ನೋಡೋದಾದರೆ ನಮ್ಮಿಂದ 30-40 ರನ್ ಹೆಚ್ಚುವರಿಯಾಗಿ ಬಂದಿದೆ. ಅದು ನಮಗೆ ದುಬಾರಿ ಆಯಿತು. ಮರಳಿ ಪೆವಿಲಿಯನ್ ಹೋಗಿ ಮನಸ್ಸನ್ನು ತಿಳಿ ಗೊಳಿಸಿಕೊಂಡುಬರೋದು ಮುಖ್ಯ. ಇದು ಮನಸ್ಸಿನ ಆಟ ಎಂದಿದ್ದಾರೆ.