ಜಪಾನ್: ಕಳೆದ ವಾರವಷ್ಟೇ ಪ್ರಬಲ ಭೂಕಂಪಕ್ಕೆ ತುತ್ತಾಗಿದ್ದ ಜಪಾನ್ನಲ್ಲಿ ಇದೀಗ ಮತ್ತೊಮ್ಮೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6ರಷ್ಟು ದಾಖಲಾಗಿದೆ. ಜಪಾನ್ನ ಕೇಂದ್ರ ಭಾಗದಲ್ಲೇ ಭೂಕಂಪದ ಕೇಂದ್ರ ಪತ್ತೆಯಾಗಿದೆ. ಜಪಾನ್ ದೇಶದ ಸಾಗರ ತೀರಗಳಲ್ಲೂ ಭೂಕಂಪದ ಅನುಭವ ಆಗಿದೆ ಎಂದು ಅಲ್ಲಿನ ಭೂಗರ್ಭ ಸಂಶೋಧನಾ ಇಲಾಖೆ ಮಾಹಿತಿ ನೀಡಿದೆ.
Side Effects Of Cashew: ಅತಿಯಾದ ಗೋಡಂಬಿ ಸೇವನೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ..!?
ಆದರೆ, ಸದ್ಯದ ಮಟ್ಟಿಗೆ ಸುನಾಮಿ ಸಂಭವಿಸುವ ಯಾವುದೇ ಮುನ್ನೆಚ್ಚರಿಕೆಯನ್ನೂ ನೀಡಲಾಗಿಲ್ಲ. ಆದರೆ, ಜಪಾನ್ ಸರ್ಕಾರ ಕಟ್ಟೆಚ್ಚರ ವಹಿಸಿದ್ದು, ಸದ್ಯ ಭೂಕಂಪದಿಂದಾಗಿ ಆಗಿರಬಹುದಾದ ಅನಾಹುತಗಳನ್ನು ಪರಿಶೀಲಿಸಲು ಹಾಗೂ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವತ್ತ ಗಮನ ಕೇಂದ್ರೀಕರಿಸಿದೆ.