ನೀವು ಹೊಸ ಸಿಮ್ ಕಾರ್ಡ್ (Sim Card) ಖರೀದಿ ಮಾಡುತ್ತೀರಾ? ಹಾಗಾದ್ರೆ ಇನ್ಮುಂದೆ ಕೆಲ ಕಠಿಣ ನಿಯಮಗಳನ್ನು ಪಾಲಿಸಬೇಕು. ಗ್ರಾಹಕರು ಮಾತ್ರವಲ್ಲ ಸಿಮ್ ವಿತರಿಸುವ ಡೀಲರ್ಗಳು ಸಹ ಕಠಿಣ ನಿಯಮಗಳನ್ನು ಪಾಲಿಸಲೇಬೇಕು. ನಿಯಮ ಪಾಲಿಸದೇ ಉಲ್ಲಂಘನೆ ಮಾಡಿದರೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಗಂಭೀರ ಪ್ರಕರಣವಾದಲ್ಲಿ ಜೈಲು (Jail) ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಬಹುತೇಕ ಸೈಬರ್ ಅಪರಾಧಗಳು ಮತ್ತು ದೇಶವಿರೋಧಿ ಕೃತ್ಯಗಳನ್ನು ಸುಳ್ಳು ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು (Mobile Sim) ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮ ಕೈಗೊಂಡಿದೆ.
ಹೊಸ ನಿಯಮಗಳು ಏನು?
ವ್ಯಾಪಾರಸ್ಥರು/ ಕಂಪನಿಗಳಿಗೆ ಮಾತ್ರ ಸಿಮ್ ಕಾರ್ಡ್ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಬಳಕೆದಾರರು ಒಂದು ಗುರುತಿನಿಂದ ಗರಿಷ್ಠ 9 ಸಿಮ್ಗಳನ್ನು ಮಾತ್ರ ಪಡೆಯಬಹುದು
ಸಿಮ್ ಕಾರ್ಡ್ ರದ್ದು/ ನಿಷ್ಕ್ರಿಯಗೊಳಿಸಿದ 90 ದಿನಗಳ ನಂತರ ಆ ಸಂಖ್ಯೆಯನ್ನು ಬೇರೆ ಗ್ರಾಹಕರಿಗೆ ನೀಡಲಾಗುತ್ತದೆ.
ಸಿಮ್ ಕಾರ್ಡ್ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ (Aadhar Card) ಮತ್ತು ಜನಸಂಖ್ಯಾ ಡೇಟಾವನ್ನು (Demographic Data Collection) ಸಲ್ಲಿಸಬೇಕಾಗುತ್ತದೆ.
ನೋಂದಾಯಿಸದ ಡೀಲರ್ಗಳ ಮೂಲಕ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡಿದರೆ ಹೊಸ ನಿಯಮಗಳ ಪ್ರಕಾರ ಟೆಲಿಕಾಂ ಆಪರೇಟರ್ಗಳಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.