ಬೆಂಗಳೂರು: ನನಗೆ ಗಂಡ ಬೇಡ ಮಗು ಬೇಡ ಅಂತಾ ಎಳೆ ಕಂದಮ್ಮನನ್ನ ಬಿಟ್ಟು ಓಡಿ ಹೋಗಿದ್ದಳು, ಆದ್ರೆ ಈಗ ಮೂರುವರೆ ವರ್ಷದ ಮಗಳನ್ನ ಹೆಂಡ್ತಿಯೇ ಕಿಡ್ನ್ಯಾಪ್ ಮಾಡಿಸಿದ್ದಾಳೆ ಅಂತಾ ಹಳೆ ಗಂಡ ಗೋಳಾಡ್ತಿದ್ದು, ಮಗಳನ್ನ ತೋರಿಸುವಂತೆ ಕಣ್ಣೀರಿಡ್ತಿದ್ದಾನೆ. ಮಗಳು ಇಲ್ಲದೆ ಅನ್ನ ನೀರು ಬಿಟ್ಟು ಪರಿತಪಿಸ್ತಿರೊ ಅಪ್ಪನ ಕಣ್ಣೀರಿನ ಕಥೆಯಿದೆ.
ಈ ಅಪ್ಪ ಮಗಳ ರೀಲ್ಸ್ ಒಮ್ಮೆ ನೋಡಿದ್ರೆ ಯಂತವರಿಗೂ ಖುಷಿಯಾಗುತ್ತೆ, ಮುದ್ದಾಳ ಮಗಳ ಜೊತೆ ಹಳೆ ಕಹಿ ನೆನೆಪು ಮರೆತು ಖುಷಿ ಪಡ್ತಿದ್ದ ಆ ತಂದೆಗೆ ಈಗ ಮತ್ತೆ ಮಗಳಿಲ್ಲದ ಸಂಕಷ್ಟ ತಂದೊಡ್ಡಿದ್ದಾರೆ. ಬನಶಂಕರಿಯ ಶಫಿ ಉಲ್ಲಾ ತನ್ನ ಮೂರುವರೆ ವರ್ಷದ ಮುದ್ದಾದ ಮಗಳು ಶಹಜಾದಿ ಅಮೈರಾಳ ಜೊತೆ ಲೋಕವನ್ನೇ ಮರೆತು ಖುಷಿಯಾಗಿದ್ದ. ಇದೀಗ ಏಕಾಏಕಿ ಮುದ್ದು ಮಗಳ ಕಿಡ್ನ್ಯಾಪ್ ಆಗಿದ್ದು ಮಗಳನ್ನ ಹುಡುಕಿಕೊಡುವಂತೆ ಶಫಿ ಅಲೆದಾಟ ನಡೆಸ್ತಿದ್ದಾರೆ.
Weather update: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ : ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ!
2015 ರಲ್ಲಿ ಶಫಿಉಲ್ಲಾ ಆಯಿಷಾ ಸಿದ್ದಿಕಿ ಅನ್ನೋರನ್ನ ಮದುವೆಯಾಗಿದ್ದ. ಹಾಲುಕುಡಿಯುವ ಮಗುವನ್ನ ಟ್ಯಾನರಿ ರಸ್ತೆಯ ಪರಿಚಿತರೊಬ್ಬರ ಮನೆಯಲ್ಲಿ ಬಿಟ್ಟು ಹೋಗಿದ್ದ ಆಯಿಷಾ ಪ್ರೀತಿಸ್ತಿದ್ದವನೊಂದಿಗೆ ಮತ್ತೊಂದು ಮದುವೆಯಾಗಿದ್ಳು. ಹೆಂಡ್ತಿಗೆ ಕುಲಾ ನೀಡಿ ಅಂದಿನಿಂದ ಮಗು ಅಮೈರಾಳ ಆರೈಕೆ ಮಾಡಿ ಮುದ್ದಾಗಿ ಬೆಳೆಸಿದ್ದು ತಂದೆ ಶಫಿ. ಫರ್ನೀಚರ್ ಶಾಪ್ ಇಟ್ಕೊಂಡಿದ್ದ ಶಫಿ ಬಳಿ ವಸೀಂ ಎನ್ನುವಾತ ಕೆಲಸ ಮಾಡ್ಕೊಂಡಿದ್ದ. ಒಂದೂವರೆ ವರ್ಷದ ಹಿಂದೆ ಕೆಲಸ ಬಿಟ್ಟು ಹೋಗಿದ್ದವನು ನಾಲ್ಕೈದು ದಿನಗಳ ಹಿಂದೆ ಪ್ರತ್ಯಕ್ಷವಾಗಿ ಅಣ್ಣಾ ಕೆಲಸಕ್ಕೆ ಸೇರಿಸಿಕೊಳ್ಳಿ ಅಂದಿದ್ದ. ಹಳೆ ಹುಡುಗ ಅಲ್ವಾ ಅಂತಾ ಶಫಿ ಕೆಲಸಕ್ಕೆ ಸೇರಿಸಿಕೊಂಡಿದ್ರು. ಈ ಖತರ್ನಾಕ್ ವಸೀಮ್ ಅವತ್ತೇ ಶಫಿಯವರ ಮುದ್ದಾದ ಮಗಳು ಅಮೈರಾಳನ್ನ ಕಿಡ್ನ್ಯಾಪ್ ಮಾಡಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಬನಶಂಕರಿ ಠಾಣೆಯಲ್ಲಿ ಕಂಪ್ಲೆಂಟ್ ಮಾಡಿರೊ ಶಫಿ, ಮಗಳನ್ನ ಹುಡುಕಿಕೊಡುವಂತೆ ಹೇಳಿದ್ರೆ, ಮಗು ಆಕೆ ತಾಯಿ ಬಳಿ ಇದೆ ಹೋಗು ಅಂತಿದ್ದಾರಂತೆ. ತಾಯಿ ಜೊತೆಗೆ ಮಗು ಇದ್ರೆ ಪರವಾಗಿಲ್ಲ ಆದ್ರೆ ಮಗುವನ್ನ ಕಾನೂನು ರೀತಿ ಮಗು ಪಡೆಯೋದು ಬಿಟ್ಟು ಕಿಡ್ನಾಪ್ ಮಾಡಿಸೋದು ಸರಿನಾ ಅಂತ ಶಫಿ ಪ್ರಶ್ನೆ ಮಾಡ್ತಿದ್ದಾರೆ. ಜೊತೆಗೆ ತಾಯಿಯೇ ಮಗುವನ್ನ ಒಂದು ಲಕ್ಷ ಕೊಟ್ಟು ಕಿಡ್ನ್ಯಾಪ್ ಮಾಡಿಸಿದ್ದಾಳೆ ಅಂತಾ ಶಫಿ ಆರೋಪಿಸ್ತಿದ್ದಾರೆ.
ಕಡೆಪಕ್ಷ ಮಗು ಕೊಡದಿದ್ರೂ ಪರವಾಗಿಲ್ಲ, ಮಗುವನ್ನ ಒಮ್ಮೆ ತೋರಿಸಿ ಅಂತಾ ಶಫಿ ಅಂಗಲಾಚ್ತಿದ್ದಾರೆ. ಮಗಳಿಗಾಗಿ ನಾನು ಇನ್ನೊಂದಹ ಮದುವೆ ಸಹ ಆಗಿಲ್ಲ ಅಂತ ಶಫಿ ಕಣ್ಣೀರಿಟ್ಟಿದ್ದಾನೆ. ಅದ್ಯಾಕೋ ಪೊಲೀಸ್ರು ಮಾತ್ರ ಕಿಡ್ನಾಪ್ ಕೇಸ್ ರಿಜಿಸ್ಟರ್ ಮಾಡಿ ಮಗು ಹುಡುಕದೆ ಸುಮ್ಮಾನಿಗಿರೋದು ಯಾಕೆ ಅನ್ನೋದು ಮಾತ್ರ ಗೊತ್ತಾಗ್ತಿಲ್ಲ.