ವಿಜಯಪುರ:– ಕೋವಿಡ್ ಅವ್ಯವಹಾರ ಪ್ರಕರಣ ತನಿಖೆಯಾಗಲಿ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕೋವಿಡ್ ಹೆಸರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿದೆಯೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದು, ರಾಜ್ಯ ಸರ್ಕಾರ ತನಿಖೆ ನಡೆಸಲಿ’ ಎಂದರು.
‘ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೂ ಆರೋಪವಿದ್ದರೆ, ರಾಜ್ಯ ಸರ್ಕಾರ ಅನುಕಂಪ ತೋರಿಸುವುದು ಅಗತ್ಯವಿಲ್ಲ.
ಸಂಬಂಧಪಟ್ಟವರಿಂದ ದಾಖಲೆ ಪಡೆದು ತನಿಖೆ ನಡೆಸಲಿ. ನಾವು ಯಾವುದೇ ಕಾರಣಕ್ಕೂ ಭಯಪಡುವುದಿಲ್ಲ’ ಎಂದು ಅವರು ಸುದ್ದಿಗಾರರಿಗೆ ಶನಿವಾರ ತಿಳಿಸಿದರು.
ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಚೆಕ್ ಬೌನ್ಸ್ ಆಗಿದೆ. ಹಣ ಜಮೆ ಮಾಡದಿದ್ದರೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದು ರಾಜ್ಯದ ಸಚಿವರ ಸ್ಥಿತಿ.
‘ಕೇಂದ್ರ ಸರ್ಕಾರದ ಬಳಿ ನಾನು ಅಥವಾ ಪಕ್ಷದ ಮುಖಂಡರು ಚಾಡಿ, ದೂರುಗಳನ್ನು ಹೇಳಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಭವಿಷ್ಯದಲ್ಲಿ ಪರಿಸ್ಥಿತಿ ಬಂದಂತೆ ಕೇಂದ್ರದಲ್ಲಿ ವರಿಷ್ಠರು ತೀರ್ಮಾನಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಅವರು ತಿಳಿಸಿದರು.