ಕಲಬುರಗಿ: ಬರೋಬ್ಬರಿ 23 ವರ್ಷಗಳ ಬಳಿಕ ಕಲಬುರಗಿ ಯುವಕನೊಬ್ಬ ರಣಜಿಗೆ ಆಯ್ಕೆಯಾಗಿದ್ದಾನೆ. ಗುಲಾಬ್ ವಾಡಿಯ ಸ್ಲಂ ಬಡಾವಣೆ ನಿವಾಸಿ ಶಶಿಕುಮಾರ್ ರಣಜಿಗೆ ಆಯ್ಕೆಯಾದ ಕ್ರೀಡಾಪಟು. ರೈಟ್ ಆಮ್೯ ಆಫ್ ಸ್ಪಿನ್ನರ್ ಆಗಿರೋ ಶಶಿಕುಮಾರ್ ಕರ್ನಾಟಕ ತಂಡ ಪ್ರತಿನಿಧಿಸಲಿದ್ದಾನೆ.
ಕಲಬುರಗಿ ಜಿಲ್ಲೆಯಿಂದ ಈ ಹಿಂದೆ 1998 ರಲ್ಲಿ ರಘುತ್ತಮ ಹಾಗೂ 2000 ರಲ್ಲಿ ವಿಜಯ್ ರಣಜಿಗೆ ಆಯ್ಕೆಯಾಗಿದ್ರು.ಹೀಗಾಗಿ ಕಲಬುರಗಿ ಜಿಲ್ಲೆಯಿಂದ ರಣಜಿಗೆ ಆಯ್ಕೆಯಾದ 3ನೇ ಆಟಗಾರ ಎಂಬ ಹೆಗ್ಗಳಿಕೆ ಶಶಿಕುಮಾರ್ ಪಾತ್ರರಾಗಿದ್ದಾರೆ. ಈ ವಿಚಾರದ ಬಗ್ಗೆ ಶಶಿಕುಮಾರ್ ಸ್ನೇಹಿತರು ಹಾಗು ಹಿತೈಷಿಗಳು ಸಂತಸಗೊಂಡಿದ್ದಾರೆ.