ಬೆಂಗಳೂರು: ಕೆಪಿಎಸ್ಸಿ ಬೋರ್ಡ್ ಮುಂದೆ, ವಿದ್ಯಾರ್ಥಿಗಳು ನೂರಾರು ಪತ್ರಗಳನ್ನು ಚೆಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಗ್ರೂಪ್ ಎ, ಬಿ, ಸಿ ನಲ್ಲಿರುವ ವಿವಿಧ ಹುದ್ದೆಗಳಿಗಾಗಿ ಎಕ್ಸಾಂ ನಡೆದು ಎರಡು ಮೂರು ವರ್ಷಗಳು ಆಗಿದೆ. ಕೆಪಿಎಸ್ಸಿ ನೋಟಿಫಿಕೇಶನ್, ಫೈನಲ್ ಲಿಸ್ಟ್ ಬಿಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಆರು ತಿಂಗಳಿಂದ ಪ್ರತಿದಿನ ಮನವಿ ಕೊಟ್ಟಿದೀವಿ ಆದರೆ ಸ್ಪಂದಿಸುತ್ತಿಲ್ಲ.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಕೆಪಿಎಸ್ಸಿ ಒಂದು ಎಕ್ಸಾಂ ಪಾಸ್ ಆಗ್ಬೇಕು ಅಂದ್ರೆ ಕಷ್ಟ ಇದೆ. ಸಾಕಷ್ಟು ಜನ ಬಡ ವಿದ್ಯಾರ್ಥಿಗಳು ಇದರಲ್ಲಿ ಎಕ್ಸಾಂ ಬರೆಯೋಕೆ ರೆಡಿಯಾಗಿದ್ದಾರೆ. ಟೈಂ ಟು ಟೈಂ ಎಕ್ಸಾಂ ನಡೆಸ್ಬೇಕು. ಆದ್ರೆ ಇವ್ರು ಹೋಲ್ಡ್ ಮಾಡ್ತಿರೋದಕ್ಕೆ ಕಾರಣ ಏನು ಗೊತ್ತಿಲ್ಲ. ಇವರ ಉದ್ದೇಶ ಏನು ಗೊತ್ತಿಲ್ಲ ಎಂದು ಪ್ರತಿಭಟನನಿರತ ಆಭ್ಯರ್ಥಿಗಳು ಕೆಪಿಎಸ್ ಸಿ ಬೋರ್ಡ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.