ಯಲಹಂಕ:-ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೆ ಗೌಡರ ನೇತೃತ್ವದಲ್ಲಿ ರಾಜ್ಯೋತ್ಸವದ ಆಚರಣೆ ಮಾಡಲಾಗಿದೆ.
ಯಲಹಂಕದ ನೂರಾರು ಯುವಕರು ಸೇರಿ ಅದ್ದೂರಿ ಆಚರಣೆ ಮಾಡಲಾಗಿದ್ದು, ಬೆಳ್ಳಿ ರಥದಲ್ಲಿ ತಾಯಿ ಭುವನೇಶ್ವರಿ ರಾರಾಜಿಸಿದ್ದಾರೆ. ಯಲಹಂಕದ ನೂರಾರು ಯುವಕರು ಸೇರಿ ಅದ್ದೂರಿ ಆಚರಣೆ ಮಾಡಿದ್ದಾರೆ. ಶಾಸಕ ಎಸ್ ಆರ್ ವಿಶ್ವನಾಥ್ ರಿಂದ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇ ಗೌಡರಿಂದ ಕನ್ನಡ ದ್ವಜಾರೋಹಣ ನಡೆದಿದೆ. ಇದೆ ವೇಳೆ ನೂರಾರು ಜನಕ್ಕೆ ಅನ್ನ ಸಂತರ್ಪಣೆ ಕೂಡ ಏರ್ಪಡಿಸಲಾಗಿತ್ತು.
ಕನ್ನಡ ಚಲನ ಚಿತ್ರ ಗೀತೆಗಳಿಗೆ ಯುವಕರು ಕುಣಿದು ಕುಪ್ಪಳಿಸಿದ್ದಾರೆ.