ಹುಬ್ಬಳ್ಳಿ: ಪರಿಸರ ರಕ್ಷಣೆಗಾಗಿ ಎಲೆಕ್ಟ್ರಿಕಲ್ ವಾಹನಗಳನ್ನು ತಯಾರಿಸಿದ್ದಾರೆ. ಆದ್ರೆ ಅವುಗಳು ಪದೇ ಪದೇ ತೊಂದ್ರೆಗೆ ಬರುತ್ತಿದ್ದು, ಓಲಾ ಎಲೆಕ್ಟ್ರಿಕಲ್ ಬೈಕ್ ಖರೀದಿಸಿದ ಮಾಲೀಕರು ಪರದಾಡುತ್ತಿದ್ದಾರೆ. ಹೌದು,,, ಓಲಾ ಎಲೆಕ್ಟ್ರಿಕಲ್ ಬೈಕ್ ನಿಂದಾಗಿ ದಿನನಿತ್ಯ ಸಂಕಷ್ಟಕ್ಕೆ ಸಿಲುಕುತ್ತಿರುವ ಸವಾರರು,
ಯಾಕಪ್ಪ ಈ ಬೈಕ್ ತಗೊಂಡೆ ಎನ್ನುವಂತಾಗಿದೆ ಖರೀದಿ ಮಾಡಿದವರ ಸ್ಥಿತಿ. ದಿನೆ ದಿನೆ ಓಲಾ ಕಂಪನಿಯ ದ್ವಿಚಕ್ರ ವಾಹನಗಳಲ್ಲಿ ದೋಷಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ, ಓಲಾ ಎಲೆಕ್ಟ್ರಿಕಲ್ ಬೈಕ್ ಖರೀದಿ ಮಾಡಿದ ಗ್ರಾಹಕರು, ಶೂರೂಮ್ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಓಲಾ ಕಂಪನಿಯ ಎಲೆಕ್ಟ್ರಿಕಲ್ ಬೈಕ್ಗಳು ಏಕಾಏಕಿ ರಸ್ತೆ ಮಧ್ಯದಲ್ಲೇ ಬಂದ್ ಬೀಳುತ್ತಿವಂತೆ. ಬೈಕ್ ಖರೀದಿ ಮಾಡಿದಾಗಿಂದ ಪ್ರತಿದಿನ ಶೋರೋಂ ಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಬಂದಿದೆ. ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರಿರುವ ಓಲಾ ಕಂಪನಿ ಶೋರೂಂಗೆ ಬಂದ ಗ್ರಾಹಕರು. ಎಷ್ಟೇ ಬಾರಿ ರಿಪೇರಿ ಮಾಡಿದರೂ ಮತ್ತೆ ಮತ್ತೆ ಬೈಕ್ ನಲ್ಲಿ ದೋಷ ಕಂಡು ಬರುತ್ತಿದೆ. ಎಲ್ಲಾ ಕೆಲಸ ಬಿಟ್ಟು ಸರ್ವೀಸ್ ಸೆಂಟರ್ದಲ್ಲಿ ನಿಲ್ಲುವಂತಾಗಿದೆ.
ಲಕ್ಷಾಂತರ ರೂಪಾಯಿ ನೀಡಿ ತೆಗೆದುಕೊಂಡ ಬೈಕ್ನ್ನು ಸರ್ವಿಸ್ ಸೆಂಟರ್ ದಲ್ಲೆ ಇಡಬೇಕಾ, ನಮಗೆ ದುಡ್ಡು ವಾಪಸ್ ನೀಡಿ ಎಂದು ಕಂಪನಿ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿ, ಹುಬ್ಬಳ್ಳಿಯ ಗ್ರಾಹಕರಿಂದ ಶೋರೂಮ್ ಬಂದ್ ಮಾಡಿ, ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ಓಲಾ ಸಿಬ್ಬಂದಿಯನ್ನು ಕರೆದೋಯ್ದಿದ್ದಾರೆ.