ಕಲಬುರಗಿ: ಗಣೇಶನ ಕಟ್ಟೆ ಕಟ್ಟುವ ವಿಚಾರ ವಿಕೋಪಕ್ಕೆ ತಿರುಗಿ ಎರಡು ಕೋಮಿನ ನಡುವೆ ಗಲಾಟೆಯಾದ ಘಟನೆ ಕಲಬುರಗಿಯ ಅಂಕಲಗಿಯಲ್ಲಿ ನಡೆದಿದೆ.. ಒಂದು ಗುಂಪು ಕಟ್ಟೆ ಕಟ್ಟಲು ಮುಂದಾದಾಗ ಮತ್ತೊಂದು ಕೋಮಿನ ಗುಂಪು ಕಿರಿಕ್ ಮಾಡಿದೆ.ಈ ವೇಳೆ ಎರಡೂ ಗುಂಪುಗಳು ಹೊಡೆದಾಡಿಕೊಂಡಿವೆ..
ಎರಡು ತಿಂಗಳ ಹಿಂದಷ್ಟೇ ಇದೇ ವಿಚಾರ ವಿವಾದವಾದಾಗ ಜೇವರ್ಗಿ ತಹಸೀಲ್ದಾರ್ ಬಂದು ಸರ್ವೆ ಮಾಡಿ ಪಂಚಾಯ್ತಿ ಜಾಗ ಅಂತ ಹೇಳಿದ್ರು.ಆಗ ಎರಡೂ ಕಡೆಯವರು ಸಮ್ಮತಿ ಸಹ ಸೂಚಿಸಿದ್ರು..ಆದ್ರೆ ಇದೀಗ ಮತ್ತೆ ಗಲಾಟೆಯಾಗಿದ್ದು ಪೋಲೀಸರು ಪರಿಶೀಲನೆ ನಡೆಸಿದ್ದಾರೆ…