ಭಾಗ್ಯಶ್ರೀ ಹಾಗೂ ಇಶಾನಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಬಳಿಕ ಬ್ರಹ್ಮಾಂಡ ಗುರೂಜಿ ಎಂಟ್ರಿ ಕೊಟ್ಟರು. ಗುರೂಜಿ ಸ್ಪರ್ಧೆಗಾಗಿ ಬಂದಿದ್ದಾರಾ ಎನ್ನುವ ಗೊಂದಲದಲ್ಲಿ ಮನೆಯವರಿದ್ರು.
ಕಾರ್ತಿಕ್, ತನಿಷಾ ಎಲ್ಲರೂ ಬ್ರಹ್ಮಾಂಡ ಗುರೂಜಿಗೆ ನಾನಾ ಪ್ರಶ್ನೆಗಳನ್ನು ಕೇಳಿದ್ರು. ನೀವು ಸ್ಪರ್ಧಿಯಾಗಿ ಬಂದ್ರಾ ಇಲ್ಲ ಗೆಸ್ಟ್ ಆಗಿ ಬಂದ್ರಾ ಎಂದ್ರು. ಇದಕ್ಕೆ ಸರಿಯಾಗಿ ಉತ್ತರಿಸದೆ ಎಲ್ಲರನ್ನು ಆಟವಾಡಿಸಿದ್ದಾರೆ.
ಮನೆಯವರ ಜೊತೆ ಬ್ರಹ್ಮಾಂಡ ಗುರೂಜಿ ಬಳಿ ಅನೇಕರು ಭವಿಷ್ಯದ ಬಗ್ಗೆ ಮಾತಾಡಿದ್ರು. ಈ ವೇಳೆ ಕಾರ್ತಿಕ್ ಮದುವೆ ಪ್ರಸ್ತಾಪ ಕೂಡ ಬಂದಿದೆ.
ಕಾರ್ತಿಕ್ ಗೆ 2 ಮದುವೆ ಆಗುವ ಯೋಗವಿದೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ರು. ಗುರೂಜಿ ಮಾತು ಕೇಳಿ ಸುಮ್ನಿರಿ ಗುರುಗಳೇ ಎಂದು ನಕ್ಕು ಸುಮ್ಮನಾದ್ರು. ಅಯ್ಯೋ ಹೌದ ಗುರೂಜಿ ಸಂತೋಷ್ ಕೂಡ ಕಾರ್ತಿಕ್ 2 ಮದುವೆ ಆಗ್ತಾರೆ ಎಂದು ತುಕಾಲಿ ಸಂತು ಹೇಳಿದ್ರು.
ಇದೇ ವೇಳೆ ಬ್ರಹ್ಮಾಂಡ ಗುರೂಜಿ ತುಕಾಲಿ ನಿನಗೆ ಮಕ್ಕಳಾಗಿದ್ಯಾ ಎಂದು ಪ್ರಶ್ನಿಸಿದ್ದಾರೆ. ಇಲ್ಲ ಎಂದ ಸಂತುಗೆ ಗುರೂಜಿ, ಯಾಕೆ ಮಾಡಿಕೊಂಡಿಲ್ಲ. ಯುಗಾದಿಯೊಳಗೆ ಮಾಡಿಕೋ ಇಲ್ಲವಾದ್ರೆ ಬುಧ ಬದಲಾಗಿ 2 ವರ್ಷ ಮುಂದಕ್ಕೆ ತಳ್ತಾನೆ ಎಂದಿದ್ದಾರೆ.
ನೀತು ನೀನು ಫಾರಿನ್ಗೆ ಹೋಗ್ತೀಯಾ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. ಬ್ರಹ್ಮಾಂಡ ಭವಿಷ್ಯ ಕೇಳಿ ಕೆಲವರು ಖುಷಿ ಪಟ್ರೆ ಮತ್ತೆ ಕೆಲವರು ಶಾಕ್ ಆಗಿದ್ದಾರೆ.