ವಿಜಯಪುರ:- ಮುಖ್ಯಮಂತ್ರಿ ಬದಲಾವಣೆ ಎಂಬ ವಿಷಯದಲ್ಲಿ ಹುರುಗಳಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಜನರ ಸಮಯ ಹಾಗೂ ಮಾಧ್ಯಮದ ಸಮಯ ಹಾಳುವ ಇಂಥ ಹೇಳಿಕೆಗಳನ್ನು ನೀಡುವುದು ರಾಜಕೀಯವಾಗಿ ಸರಿಯಾದ ನಿಲುವಲ್ಲ ಎಂದು ಸಿಡುಕಿದರು.
ಯಾರಿಗೆ ಉದ್ಯೋಗ ಇಲ್ಲವೋ ಅಂಥವರು ಪ್ರಚಾರಕ್ಕೆ ಅನಗತ್ಯವಾಗಿ ಮುಖ್ಯಮಂತ್ರಿ ಬದಲಾವಣೆ ಅಂತೆಲ್ಲ ಮಾತನಾಡುತ್ತಿದ್ದಾರೆ ಎಂದು ವಿಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಖ್ಯಮಂತ್ರಿ ಬದಲಾವಣೆ, ಸರ್ಕಾರದ ಪತನದ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರಿಗೆ ಪ್ರಚಾರ ಬೇಕಾಗಿದೆ ಅವರು ಸಿಎಂ ಪದದ ಬಗ್ಗೆ ಚರ್ಚೆ ಮಾಡುತ್ತಾರೆ. ಸರ್ಕಾರ ನಿದ್ದೆ ಮಾಡುತ್ತಿದೆ, ಮುಖ್ಯಮಂತ್ರಿ ಬದಲಾವಣೆಗೆ ತಂತ್ರ ನಡೆಯುತ್ತಿದೆ, ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂದೆಲ್ಲ ವಿಪಕ್ಷಗಳ ನಾಯಕರು ನೀಡುತ್ತಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದರು.