ಬೆಂಗಳೂರು: ಅವರಿಬ್ಬರೂ ಬೆಂಗಳೂರಿನ ನಟೋರಿಯಸ್ ರೌಡಿಶೀಟರ್ ಗಳು ಹಣಕಾಸು ವಿಚಾರಕ್ಕೆ ಒಬ್ಬನ ಮೇಲೆ ಮತ್ತೊಬ್ಬನ ಗ್ಯಾಂಗ್ ಅಟ್ಯಾಕ್ ಮಾಡಿತ್ತು ಈ ಹಳೆ ದ್ವೇಷಕ್ಕೆ ಆತನನ್ನ ಮುಗಿಸಲೇಬೇಕಂತ ಡಿಸೈಡ್ ಮಾಡಿದ ಗ್ಯಾಂಗ್ ಆತನಿದ್ದ ಊರಿಗೆ ಹುಡುಕಿಕೊಂಡು ಹೋಗಿ ಹತ್ಯೆ ಮಾಡಲು ಸ್ಕೆಚ್ ಹಾಕಿದ್ರು. ಆದರೆ ಆತ ಇವರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದ. ಸಿಲಿಕಾನ್ ಸಿಟಿಯಲ್ಲಿ ನಡೆಯಬೇಕಿದ್ದ ಗ್ಯಾಂಗ್ ವಾರ್ ನನ್ನ ಸಿಸಿಬಿ ಪೊಲೀಸರು ತಪ್ಪಿಸಿ ಆರೋಪಿಗಳ ಎಡೆಮರಿ ಕಟ್ಟಿದ್ದಾರೆ ಹಾಗಾದ್ರೆ ಯಾರು ಆ ನಟೋರಿಯಸ್ ರೌಡಿಶೀಟರ್ ಈ ಸ್ಟೋರಿ ನೋಡಿ.
ಟಾಲಿವುಡ್, ಕಾಲಿವುಡ್ ಸಿನಿಮಾಗಳನ್ನು ಮೀರಿಸೋ ರೇಂಜಿಗೆ ಹತ್ತಾರು ಕಾರುಗಳಲ್ಲಿ ಬಿಲ್ಡಪ್ ಕೊಟ್ಟುಕೊಂಡು ಈ ಗ್ಯಾಂಗ್ ಹೊರಟಿದ್ದು, ರೌಡಿಯೊಬ್ಬನ ಹತ್ಯೆಗೆ ಸ್ಕೇಚ್ ಹಾಕಿ ಹತ್ತಾರು ಕಾರುಗಳಲ್ಲಿ ಊರಿಂದ ಊರಿಗೆ ಬಿಲ್ಡಪ್ ಯಾತ್ರೆ ಮಾಡಿ ರೌಡಿಗಳ ಈ ಹಬ್ಬರದ ಯಾತ್ರೆ ಮೊಬೈಲ್ ನಲ್ಲಿ ಸೆರೆಯಾಗಿದೆ.
ಅಂದಹಾಗೇ, ರೌಡಿಶೀಟರ್ ಒಬ್ಬನ ಹತ್ಯೆಗೆ ಸ್ಕೇಚ್ ಹಾಕಿದ ಮತ್ತೊಂದು ರೌಡಿ ಪಟಾಲಂ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಊರಿಂದ ಊರಿಗೆ ಹೊರಟಿದ್ದಾರೆ ಹೋಗುತ್ತಿರುವ ದೃಶ್ಯಗಳನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಈಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೀಗೆ ಸಿಸಿಬಿ ಬಲೆಗೆ ಬಿದ್ದ ರೌಡಿ ಪಟಾಲಂ, ಸಂತೋಷ್ ಅಲಿಯಾಸ್ ಸಂತು, ಕಿರಣ್, ಹರೀಶ್, ರಘು ಮತ್ತು ಕುಮಾರ್. ಈ ರೌಡಿ ಆಸಾಮಿಗಳು ಕುಣಿಗಲ್ ಮೂಲದ ರೌಡಿಶೀಟರ್ ರವಿ ಅಲಿಯಾಸ್ ಟ್ಯಾಂಗೋ ರವಿ ಹತ್ಯೆಗೆ ಸ್ಕೇಚ್ ಹಾಕಿ. ಮರ್ಡರ್ ಮಾಡಲು ಬೆಂಗಳೂರಿನಿಂದ ಕುಣಿಗಲ್ ವರೆಗೆ ಹೋಗಿದ್ದರು..
ಬಂಧಿತ ಸಂತೋಷ್ ಅಲಿಯಾಸ್ ಸಂತು ಮತ್ತು ಟ್ಯಾಂಗೋ ರವಿ ಇಬ್ಬರು ಕೂಡ ನಟೋರಿಯಸ್ ರೌಡಿಶೀಟರ್ ಗಳು. ಇಬ್ಬರು ನೆಲಮಂಗಲದ ಇಸ್ಪೀಟ್ ಅಡ್ಡೆಯೊಂದಕ್ಕೆ ಫೈನಾನ್ಸ್ ಮಾಡ್ತಿದ್ರಂತೆ. ಫೈನಾನ್ಸ್ ವಿಚಾರಕ್ಕೆ ಗಲಾಟೆಯಾಗಿ ಟ್ಯಾಂಗೋ ರವಿ ಸಂತೋಷ್ ಮೇಲೆ ಹಲ್ಲೆ ಮಾಡಿದ್ದಾನೆ. ಇದಕ್ಕೆ ರಿವೆಂಜ್ ತೀರಿಸಿಕೊಳ್ಳಲು ಮುಂದಾದ ಸಂತು, ರವಿ ಹತ್ಯೆಗೆ ಸ್ಕೇಚ್ ಹಾಕಿದ್ದ. ಅದಕ್ಕಾಗಿ ತನ್ನ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಟ್ಯಾಂಗೋ ರವಿ ಊರಾದ ಅಮೃತೂರಿಗೆ ಹೋಗಿದ್ದಾನೆ. ಅದ್ರೆ ರವಿ ಮನೆಯಿಂದ ಎಸ್ಕೇಪ್ ಆಗಿದ್ದು, ಸಂತು ಸ್ಕೇಚ್ ಫೇಲ್ ಆಗಿತ್ತು.
ಈ ವೇಳೆ ಸ್ಥಳೀಯ ಪೊಲೀಸರು ಎಚ್ಚರಿಕೆ ಕೊಟ್ಟು ವಾಪಸ್ ಕಳಿಸಿದ್ದಾರೆ. ನಂತರ ಟ್ಯಾಂಗೋ ಹತ್ಯೆಗೆ ಸಂತೋಷ್ ಪೀಣ್ಯ ಬಳಿ ಮತ್ತೊಂದು ಸ್ಕೇಚ್ ಹಾಕಿದ್ದ. ಈ ವಿಚಾರ ತಿಳಿದ ಸಿಸಿಬಿ ರೌಡಿ ನಿಗ್ರಹ ದಳ ಕೂಡಲೇ ಕಾರ್ಯಾಚರಣೆ ನಡೆಸಿ ಐವರನ್ನ ಬಂಧಿಸಿದ್ದಾರೆ.ಬಂಧಿತ ರೌಡಿಗಳ ಬಳಿ ಲಾಂಗ್, ಮಚ್ಚು, ಪೆಪ್ಪರ್ ಸ್ಪ್ರೇಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೌಡಿ ಆಸಾಮಿಗಳ ಮೊಬೈಲ್ ಪರಿಶೀಲನೆ ವೇಳೆ ಕುಣಿಗಲ್ನ ಅಮೃತೂರಿಗೆ ಹೊರಟಿದ್ದ ಕಾರುಗಳ ವಿಡಿಯೋಗಳು ಕೂಡ ಪತ್ತೆಯಾಗಿವೆ.
ಸದ್ಯ ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅದೇನೆ ಇರಲಿ ನಗರದಲ್ಲಿ ಮತ್ತೆ ಭೂಗತ ಪಾತಕಿಗಳ ಅಟ್ಟಹಾಸ ಶುರುವಾಗಿದ್ದು.ಪೊಲೀಸರು ಇನ್ನಾದ್ರು ಇಂತಹ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕಿದೆ.