ಬೆಂಗಳೂರು:-ರಾಜಧಾನಿ ಬೆಂಗಳೂರಿನ ಹಲವೆಡೆ ಇಂದಿನಿಂದ ಎರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಇಂದು ಮತ್ತು ನಾಳೆ ಕೆಲವು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಮಾಡುತ್ತಿರುವ ಹಿನ್ನೆಲೆ ನ.21 ಮತ್ತು ನ.22ರಂದು ಬೆಂಗಳೂರು ನಗರದಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಯಿದೆ.
ಎಸ್.ಜೆ.ಎಂ.ನಗರ, ಬಾಬು ಜಗಜೀವನ ನಗರ ಹಾಗೂ ಇತರೆ ಪ್ರದೇಶಗಳು, ದೇವರಾಜ್ ಅರಸ್ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ಎಸ್ಪಿ ಕಚೇರಿ, ಆರ್ಟಿಒ ಕಚೇರಿ ಹಾಗೂ ಎಸ್.ಎಂ.ಕೆ.
ಚೋಳೂರುಪಾಳ್ಯ, ಪ್ರೇಮನಗರ, ಶಂಕರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಯುನಾನಿ ಆಸ್ಪತ್ರೆ, ನಿರೀಕ್ಷಿತ ಭವನ ಮತ್ತು ಪಿ ಆಯಂಡ್ ಟಿ ಲೇಔಟ್
ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಫೋಟೋಗಳು, ಸಂದೇಶಗಳು ಅಥವಾ ವೀಡಿಯೊಗಳನ್ನು ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸುವ ಮೂಲಕ ಪರಿಹಾರ ಪಡೆದುಕೊಳ್ಳಲು ಬೆಸ್ಕಾಂ ಸಲಹೆ ನೀಡಿದೆ.