ಚಿಣಮಗೇರಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ಸಾಂಬಾರ್ ಪಾತ್ರೆಗೆ ಬಿದ್ದು ಬಾಲಕಿ ಸಾವು ಹಿನ್ನಲೆ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಬಿಜೆಪಿ ಮುಖಂಡ ಅವ್ವಣ್ಣ ಮ್ಯಾಕೇರಿ ಸರ್ಕಾರವನ್ನ ಆಗ್ರಹಿಸಿದ್ದಾರೆ.. ಚಿಣಮಗೇರಿಯಲ್ಲಿಂದು ಮೃತ ಬಾಲಕಿ ಮಹಂತಮ್ಮ ಕುಟುಂಬಸ್ಥರಿಗೆ ಭೇಟಿಯಾಗಿ ಸಾಂತ್ವನ ಹೇಳಿ ಚರ್ಚಿಸಿದ್ರು..
ಇದು ಶಾಲೆಯಲ್ಲಿ ನಡೆದಿರೋ ಘಟನೆ.ಮಾತ್ರವಲ್ಲ ಸರ್ಕಾರದ ನಿರ್ಲಕ್ಷಕ್ಕೆ ಆಗಿರೋ ದುರಂತ.. ಹೀಗಾಗಿ ಸರ್ಕಾರ ಬಾಲಕಿ ಪೋಷಕರಿಗೆ 1 ಕೋಟಿ ಪರಿಹಾರ ನೀಡಬೇಕು ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ.ಈಡೇರಿಸದಿದ್ರೆ ಹೋರಾಟ ಮಾಡ್ತೇವೆ ಅಂತ ಹೇಳಿದ್ರು..