ಬೆಂಗಳೂರು: ವಿದ್ಯುತ್ ಹರಿದು ತಾಯಿ ಮಗು ಸಾವು ಪ್ರಕರಣ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ಶಾಸಕ ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.
ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ಅಡಿ ದೂರು ದಾಖಲು ಮಾಡಲು ಟ್ವೀಟ್ ಮಾಡುವ ಮೂಲಕ ಆಗ್ರಹ ವ್ಯಕ್ತಪಡಿಸಿದ್ದಾರೆ.
ಪಾದ ಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ತಾಯಿ ಮತ್ತು ಒಂಬತ್ತು ತಿಂಗಳ ಮಗು ಬೆಂಕಿ ಹೊತ್ತಿಕೊಂಡು ಮೃತ ಪಟ್ಟಿರುವ ಘಟನೆ ಅತ್ಯಂತ ದಾರುಣ.
ಇದನ್ನು "ಕೊಲೆ ಪ್ರಕರಣ" ಎಂದೇ ಬಗೆದು ಬೆಸ್ಕಾಂ ನ ಸಂಬಂಧಪಟ್ಟ ಆ ಬೇಜವಬ್ದಾರಿ ಅಧಿಕಾರಿಗಳ ವಿರುದ್ಧ ಕೊಲೆಯ ಆರೋಪದ ಅಡಿ ಕ್ರಮ ಕೈಗೊಳ್ಳಬೇಕು.
— S.Suresh Kumar (@nimmasuresh) November 20, 2023
ಪಾದ ಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ತಾಯಿ ಮತ್ತು ಒಂಬತ್ತು ತಿಂಗಳ ಮಗು ಬೆಂಕಿ ಹೊತ್ತಿಕೊಂಡು ಮೃತ ಪಟ್ಟಿರುವ ಘಟನೆ ಅತ್ಯಂತ ದಾರುಣ. ಇದನ್ನು “ಕೊಲೆ ಪ್ರಕರಣ” ಎಂದೇ ಬಗೆದು ಬೆಸ್ಕಾಂ ನ ಸಂಬಂಧಪಟ್ಟ ಆ ಬೇಜವಬ್ದಾರಿ ಅಧಿಕಾರಿಗಳ ವಿರುದ್ಧ ಕೊಲೆಯ ಆರೋಪದ ಅಡಿ ಕ್ರಮ ಕೈಗೊಳ್ಳಬೇಕು.