ನವದೆಹಲಿ: ಖಾಸಗಿ ಶಾಲೆಗಳು ಆರನೇ ಮತ್ತು ಏಳನೇ ಕೇಂದ್ರ ವೇತನ ಆಯೋಗಗಳ (CPC) ಶಿಫಾರಸುಗಳನ್ನು ಜಾರಿಗೊಳಿಸಬೇಕು ಮತ್ತು ತಮ್ಮ ಬೋಧಕ, ಬೋಧಕೇತರ ಸಿಬ್ಬಂದಿಗೆ ಕಡ್ಡಾಯ ವೇತನ ಮತ್ತು ಇತರ ಪ್ರಯೋಜನಗಳನ್ನು ನೀಡಬೇಕು ಎಂದು ದೆಹಲಿ ಹೈಕೋರ್ಟ್ (Delhi HighCourt) ಆದೇಶಿಸಿದೆ. ರಾಷ್ಟ್ರ ರಾಜಧಾನಿಯ ವಿವಿಧ ಖಾಸಗಿ ಶಾಲೆಗಳ (Private Schools) ಬೋಧಕ ಮತ್ತು
ಬೋಧಕೇತರ ಉದ್ಯೋಗಿಗಳು 6ನೇ ಮತ್ತು 7ನೇ ವೇತನ ಆಯೋಗಗಳ ಪ್ರಯೋಜನಗಳನ್ನು ಮತ್ತು ಬಡ್ಡಿಯೊಂದಿಗೆ ತಮ್ಮ ಬಾಕಿಗಳ ಪಾವತಿಸುವಂತೆ ಮತ್ತು ಇತರ ಪ್ರಯೋಜನಗಳನ್ನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ನೀಡಿದ ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರು ವೇತನ ಆಯೋಗಗಳ (Planning Commission of India) ಶಿಫಾರಸಿನ ಪ್ರಕಾರ ಖಾಸಗಿ ಶಾಲೆಗಳ ನೌಕರರು ವೇತನ ಪಡೆಯುವ ಹಕ್ಕನ್ನು ಹೊಂದಿದ್ದಾರೆ,
ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಕೇಸ್: ತನಿಖೆ ವೇಳೆ ಸ್ಪೋಟಕ ವಿಚಾರ ಬೆಳಕಿಗೆ
ಶಾಲೆಗಳು ತಮ್ಮ ಸಿಬ್ಬಂದಿಗೆ ಈ ಪ್ರಯೋಜನಗಳನ್ನು ನಿರಾಕರಿಸಲು ಹಣದ ಕೊರತೆಯ ನೆಪವನ್ನು ಉಲ್ಲೇಖಿಸಬಾರದು ಎಂದು ತಾಕೀತು ಮಾಡಿದೆ. ವೇತನ ಆಯೋಗಗಳ ಶಿಫಾರಸುಗಳ ಪ್ರಕಾರ ಅನುದಾನರಹಿತ ಅಲ್ಪಸಂಖ್ಯಾತ ಶಾಲೆಗಳು ಸಹ ತಮ್ಮ ಉದ್ಯೋಗಿಗಳಿಗೆ ವೇತನ ಮತ್ತು ಇತರ ಸೌಲಭ್ಯಗಳನ್ನು ಪಾವತಿಸಬೇಕು ಎಂದು ನ್ಯಾಯಮೂರ್ತಿ ಸಿಂಗ್ ಸ್ಪಷ್ಟಪಡಿಸಿದರು. 6ನೇ ಮತ್ತು 7ನೇ ವೇತನ ಆಯೋಗಗಳು ಸೂಚಿಸಿದ ಶಿಫಾರಸುಗಳು ಮತ್ತು ಮಾರ್ಗಸೂಚಿಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಉನ್ನತ ಅಧಿಕಾರದ ಸಮಿತಿಗಳನ್ನು (ಎಚ್ಪಿಸಿ) ರಚಿಸುವಂತೆ ನ್ಯಾಯಾಲಯವು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.