ಕಲಬುರ್ಗಿ:- ಕಾರ್ತಿಕ ಮಾಸ ಅಂದ್ರೆ ಅದು ಬೆಳಕಿನ ಹಬ್ಬ..ಅದು ದೀಪಗಳ ಹಬ್ಬ.ಹೀಗಾಗಿ ಕಲಬುರಗಿ ಜಿಲ್ಲೆ ಭೀಮಾ ನದಿ ತಟದಲ್ಲಿರುವ ಪುರಾತನ ಕ್ಷೇತ್ರ ಸನ್ನತಿಯಲ್ಲಿ ಕಾರ್ತಿಕ ಮಾಸದ ದೀಪೋತ್ಸವ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ನೂರಾರು ಭಕ್ತರ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಚಂದ್ರಲಾಂಬೆಯ ಸನ್ನಿಧಿಗೆ ಬಂದು ಹಣತೆಗಳನ್ನಿಟ್ಟು ದೀಪ ಬೆಳಗಿದ್ರು.ದೇಗಲದ ಪ್ರಾಂಗಣ ಹೊಸ್ತಿಲು ದೀಪಸ್ತಂಭ ಅಂಗಳ ಹೀಗೆ ಎಲ್ಲೆಲ್ಲೂ ದೀಪಗಳ ಸಾಲು ಮೇಳೈಸಿತ್ತು.
ಹೀಗೆ ಶಕ್ತಿ ಪೀಠಕ್ಕೆ ಹೆಸರಾಗಿರುವ ಸನ್ನತಿ ಪುಣ್ಯ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಭಾನುವಾರ ಜಗಮಗಿಸುತಿತ್ತು. ದೇಗುಲದ ಅರ್ಚಕ ಗೋಪಾಲ ಭಟ್ ದೀಪೋತ್ಸವದ ಸಂಕಲ್ಪ ನಡೆಸಿಕೊಟ್ಟರು..