ಹುಬ್ಬಳ್ಳಿ: ಮಹಿಳೆಯೊಬ್ಬಳು ರಸ್ತೆ ದಾಟುತ್ತಿರುವಾಗ, ಏಕಾಏಕಿ ಬಂದ ಲಾರಿ, ಮಹಿಳೆ ಕಾಲು ಮೇಲೆ ಹಾಯ್ದು ಹೋದ ಪರಿಣಾಮ, ಮಹಿಳೆಗೆ ಗಂಭೀರ ಗಾಯವಾದ ಘಟನೆ ಹುಬ್ಬಳ್ಳಿಯ, ಮಹಿಳಾ ವಿದ್ಯಾಪೀಠದಿಂದ ಪ್ರಾದೇಶಿಕ ಬಿಆರ್ಟಿಎಸ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹೌದು,,, ಮಹಿಳೆ ರಸ್ತೆ ದಾಟಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದರು, ಆ ವೇಳೆ ವೇಗವಾಗಿ ಬಂದ ಲಾರಿ ಚಾಲಕ ಮಹಿಳೆಗೆ ಗುದ್ದಿದ್ದಾನೆ. ಗುದ್ದಿದ ರಬಸಕ್ಕೆ ಮಹಿಳೆ ಕೈ ಕಾಲು ರಕ್ತಗತವಾಗಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಅಲ್ಲೆ ಇದ್ದ ಸ್ಥಳೀಯರು ಆ ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸ್ಥಳಕ್ಕೆ ಬಂದ ಕಾಟನ್ ಮಾರ್ಕೆಟ್ ಟ್ರಾಫಿಕ್ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆ ಮಹಿಳೆ ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲಾ.