ಬೆಂಗಳೂರು:– ರಾಜಧಾನಿ ಬೆಂಗಳೂರಿನ ಬ್ರ್ಯಾಂಡ್ ಅನ್ನು ಹೆಚ್ಚಿಸುವ ಸಲುವಾಗಿ ಬಿ.ಎಲ್.ಆರ್ ಹಬ್ಬ ಆಚರಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರು ಹಬ್ಬ’ ಆಚರಣೆಗೆ ಪಾಲಿಕೆ ಸಹಕಾರ ನೀಡುವ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿ, ಸರ್ಕಾರದ ಘನತೆ ಹಾಗೂ ಬೆಂಗಳೂರಿನ ಬ್ರ್ಯಾಂಡ್ ಅನ್ನು ಹೆಚ್ಚಿಸುವ ಸಲುವಾಗಿ ಹಬ್ಬ ಆಚರಿಸಲಾಗುತ್ತಿದೆ ಎಂದರು.
2024ರಿಂದ ಆಯಾ ಋತುವಿಗೆ ತಕ್ಕಂತೆ ಹಬ್ಬಗಳನ್ನು ಆಚರಿಸಲಾಗುತ್ತದೆ. ಬೆಂಗಳೂರು ಹಬ್ಬಕ್ಕೆ ಪ್ರಮುಖ ಸ್ಥಳ, ಜಂಕ್ಷನ್ಗಳು, ಮೇಲ್ಸೇತುವೆ, ಉದ್ಯಾನಗಳು, ಮಾರುಕಟ್ಟೆಗಳನ್ನು ಗುರುತಿಸಿ ಸ್ವಚ್ಚತಾ ಕಾರ್ಯ ಕೈಗೊಳ್ಳಬೇಕು. ಪಾರಂಪರಿಕ ಕಟ್ಟಡಗಳು ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳ ಮೇಲೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲು ಸೂಚಿಸಿದರು.
‘ಬೆಂಗಳೂರು ಹಬ್ಬ’ದ ನಿರ್ದೇಶಕ ರವಿಚಂದರ್ ಮಾತನಾಡಿ, ‘ಅನ್ ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್ ವತಿಯಿಂದ ಡಿ.1ರಿಂದ 11ರವರೆಗೆ ‘ಅನ್ ಬಾಕ್ಸಿಂಗ್ ಬಿ.ಎಲ್.ಆರ್ ಹಬ್ಬ’ ಆಚರಿಸಲಾಗುತ್ತಿದೆ. 12 ವರ್ಗಗಳಾಗಿ ವಿಂಗಡಿಸಿ, 45 ಮಾದರಿಗಳಲ್ಲಿ ಆಚರಣೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.