ಕಲಬುರಗಿ: ಇಂದಿನಿಂದ ಎರಡು ದಿನಗಳ ಕಾಲ ನಡೆಯುವ KEA ಪರೀಕ್ಷೆಯ ಬಂದೋಬಸ್ತ್ ಅತ್ಯಂತ ಬಿಗಿಯಾಗಿದೆ.. ಕಲಬುರಗಿಯಲ್ಲಿ ಸೆಕ್ಯೂರಿಟಿ ಜೋರಾಗಿದ್ದು ರೂಲ್ಸ್ ಅಂದ್ರೆ ಅಂತ KEA ಹಾಕಿದ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ..ತಾಳಿ ಕಾಲುಂಗುರ ಹೊರತು ಪಡಿಸಿ ಇನ್ಯಾವುದಕ್ಕೂ ಅವಕಾಶ ಇಲ್ಲದ ಕಾರಣ ಯುವತಿಯರು ಕಿವಿಯೋಲೆ ಬಿಚ್ಚಿ ಎಕ್ಸಾಂ ಬರೆಯಲು ಹೋದ್ರು..
ಇದೇವೇಳೆ ಯುವಕರಿಗೂ ಚಕಿಂಗ್ ಜೋರಾಗಿ ಮಾಡಲಾಗ್ತಿದೆ.. ಆಫ್ ಶರ್ಟ್ ತೊಟ್ರೂ ಅದರ ಮೇಲೆ ಕಂಪನಿಯ ಮೆಟಲ್ ರೂಪದ ಲೇಬಲ್ ಇದ್ರೂ ಅದನ್ನ ಕಟ್ ಮಾಡಿ ಪರೀಕ್ಷಾ ಕೇಂದ್ರಕ್ಕೆ ಬಿಡುವ ದೃಶ್ಯ ಎದ್ದು ಕಾಣುತಿತ್ತು.. ಎರಡು ದಿನಗಳ ಈ ಪರೀಕ್ಷೆಗೆ ಕಲಬುರಗಿಯಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳನ್ನ ತೆರೆಯಲಾಗಿದೆ..