ಬೆಂಗಳೂರು: ಒಕ್ಕಲಿಗರ ಸಂಘ ಎನ್ನುವುದು ಭ್ರಷ್ಟರ ಪಾಲಿಗೆ ಕರೆಯುವ ಹಸುವಿದ್ದಂತೆ. ಸಮುದಾಯದ ಪೂರ್ವಿಕರು ಸಂಘದ ನಿರ್ವಹಣೆ, ಅಭಿವೃದ್ಧಿಗೆ ಸಂಪನ್ಮೂಲಕ್ಕಾಗಿ ಸಾಕಷ್ಟು ಲಾಭದಾಯಕವಾದ ಆಸ್ತಿಗಳನ್ನು ಬಿಟ್ಟು ಹೋಗಿದ್ದಾರೆ. ಅಧಿಕಾರ ಲಾಲಸೆ ಮತ್ತು ಧನದಾಹದಿಂದ ಸಂಘ ಪ್ರವೇಶಿಸಿದ ಹಲವರು ಕಾಮಧೇನುವಿನ ಕೆಚ್ಚಿಲನ್ನೇ ಕುಯ್ಯುವ ನಿಕೃಷ್ಟ ಮಟ್ಟಕ್ಕೆ ಇಳಿದಿದ್ದಾರೆ. ಹೌದು ಸಮುದಾಯದ ಹೆಸರಿನಲ್ಲಿ ಕೋಟಿ ಕೋಟಿ ಮೌಲ್ಯದ ಸ್ವತ್ತನ್ನ ಕಬಳಿಸೋ ಯತ್ನ ನಡೆಯುತ್ತಿರೋ ಆರೋಪ ಒಕ್ಕಲಿಗರ ಸಂಘ ಹೊತ್ತುಕೊಂಡಿದೆ. ಹಾಗಾದ್ರೆ ಏನಿದು ಒಕ್ಕಗರಿಗರ ಸಂಘದಲ್ಲಿ ನಡೆದಿರೋ ಕರ್ಮಕಾಂಡ ಬನ್ನಿ ತೋರಿಸ್ತೀವಿ
ಒಕ್ಕಲಿಗ ಸಮಾಜದ ಮಹನೀಯರು ತಮ್ಮದೇ ಆದ ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಸಂಘವನ್ನು ಸ್ಥಾಪನೆ ಮಾಡಿದ್ದರು. ಆಡಳಿತ ನಡೆಸಿದವರೆಲ್ಲರೂ ಭ್ರಷ್ಟರೆಂದೇನಲ್ಲ. ಆದರೆ, ಬಹುತೇಕರು ಭ್ರಷ್ಟಾಚಾರ ನಡೆಸಿ ಪಾಪದ ಮೂಟೆ ಹೊತ್ತಿದ್ದಾರೆ. ಹಣ ಕೊಳ್ಳೆಹೊಡೆದದ್ದನ್ನಾದರೂ ಕ್ಷಮಿಸಿಬಿಡಬಹುದೇನೋ. ಆದರೆ, ಸಂಘದ ಆಸ್ತಿಪಾಸ್ತಿಯನ್ನು ವಿವಾದಕ್ಕೆ ಸಿಲುಕಿಸಿ, ಸಂಘ ಮತ್ತು ಸಮುದಾಯದ ಗೌರವಕ್ಕೆ ಚ್ಯುತಿ ತಂದವರು ಕ್ಷಮೆಗೆ ಅರ್ಹರೇ ಅಲ್ಲ.ಒಕ್ಕಲಿಗರ ಸಂಘದ ಭ್ರಷ್ಟಾತಿಭ್ರಷ್ಟರಿಗೆ ಪಾಪಪ್ರಜ್ಞೆ ಎಂಬುದೇ ಇಲ್ಲ. ಕನಿಷ್ಠಪಕ್ಷ ಸಮಾಜಕ್ಕೆ ಅಂಜುವ ಜಾಯಮಾನವೂ ಅವರದ್ದಲ್ಲ ಎನ್ನುವುದು ಜಗಜ್ಜಾಹೀರವಾಗಿದೆ.ನಾಚಿಕೆ, ಅಂಜಿಕೆಯಿಲ್ಲದೆ ಸ್ವೇಚ್ಚಾರದಿಂದ ವರ್ತಿಸುವ ಲಜ್ಜೆಗೇಡಿಗಳು ರಾಜ್ಯ ಒಕ್ಕಲಿಗರ ಸಂಘದಲ್ಲಿ ತಾಂಡವಾಡ್ತಿದ್ದಾರೆ..
ಹೌದು..ಒಕ್ಕಲಿಗರ ಸಂಘದ ನಿರ್ದೇಶಕ, ಪದಾಧಿಕಾರಿಯಾಗಲು ಕೋಟ್ಯಂತರ ರೂ. ಹಣ ಸುರಿಯುತ್ತಾರೆ. ಗೆದ್ದು ಹೋದವರು ಐದು ವರ್ಷದಲ್ಲಿ ಮೆಡಿಕಲ್ ಪದವಿ ಮತ್ತು ಸ್ನಾತಕೋತ್ತರ ಪದವಿ ಸೀಟುಗಳನ್ನು ಹರಾಜಿಗಿಟ್ಟು, ದುಡ್ಡು ಕೊಳ್ಳೆ ಹೊಡೆಯುತ್ತಾರೆಯೇ ಹೊರತು ಸಮುದಾಯದ ಬಡ, ಮಧ್ಯಮ ವರ್ಗದ ಪ್ರತಿಭಾನ್ವಿತರಿಗೆ ಅನುಕೂಲ ಮಾಡುವ ಕಾಳಜಿ ಯಾರಿಗೂ ಇಲ್ಲ. ಒಕ್ಕಲಿಗರ ಸಂಘದ ಸುಪರ್ದಿಯಲ್ಲೇ ನೂರಾರು ಕೋಟಿ ಆಸ್ತಿ, ಕೆಂಪೇಗೌಡ ಆಸ್ಪತ್ರೆಯಿದೆ. ಅಲ್ಲಿ ಸಮುದಾಯದ ರೋಗಿಗಳಿಗಿರಲಿ, ಸಂಘದ ಸದಸ್ಯತ್ವ ಹೊಂದಿದ ಯಾವೊಬ್ಬ ಬಡ ಒಕ್ಕಲಿಗನಿಗೂ ಉಚಿತ ಇಲ್ಲವೇ ರಿಯಾಯಿತಿ ಸೌಲಭ್ಯದ ಚಿಕಿತ್ಸೆ ದೊರೆತ ನಿದರ್ಶನವಿಲ್ಲ. ಬೆರಳೆಣಿಕೆ ನಿರ್ದೇಶಕರನ್ನು ಹೊರತುಪಡಿಸಿದರೆ ಬಹುತೇಕರು ಬಡ ರೋಗಿಗಳಿಗೆ ಸ್ಪಂದಿಸುವ ಕನಿಷ್ಠ ಸೌಜನ್ಯವನ್ನೂ ತೋರುತ್ತಿಲ್ಲ… ಮೆಡಿಕಲ್ ಸೀಟು ಹಗರಣ ಮತ್ತು ವಿವಿಧ ಬಾಬ್ತು ಬಟವಾಡೆಯಲ್ಲಿ ಕಂಠ ಮಟ್ಟಕ್ಕೆ ಹಣ ನುಂಗಿ ಮೇಯ್ದ ಭ್ರಷ್ಟರು ಕುಟುಂಬಸ್ಥರ ಹೆಸರಿಲ್ಲಿ ನೀಡಿದ ಚೆಕ್ಗಳು ಬೌನ್ಸ್ ಆಗಿವೆ. ಕೆಲವರು ಸಮುದಾಯಕ್ಕೆ ಮುಖ ತೋರಿಸಲು ನಾಚಿಯಾಗುವಷ್ಟು ನೀಚ ಮಟ್ಟಕ್ಕೆ ಇಳಿದ ನಿದರ್ಶನಗಳು ನಮ್ಮ ಕಣ್ಮುಂದಿವೆ. ನಿರ್ಮಾಣ ಕಾಮಗಾರಿಗಳ ಹೆಸರಲ್ಲಿ ಲೆಕ್ಕವಿಲ್ಲದಷ್ಟು ಹಣವನ್ನು ತಿಂದು ತೇಗಿದ್ದಾರೆ.ಇದೀಗ ಇಷ್ಟು ಸಾಲದು ಅಂತ ಸಂಘದಲ್ಲಿ ಕುಳಿತಿರೋ ಭ್ರಷ್ಟರು ಇರೋ ಆಸ್ತಿಪಾಸ್ತಿಗಳನ್ನ ಕರಗಿಸೋಕೆ ಮುಂದಾಗಿದ್ದಾರೆ. ಸಜ್ಜೆಪಾಳ್ಯದಲ್ಲಿ ಸಂಘಕ್ಕೆ ಸೇರಿದ ಆಸ್ತಿ ವಿಚಾರದಲ್ಲೂ ಆಡಳಿತ ಮಂಡಳಿಯಲ್ಲಿದ್ದುಕೊಂಡೇ ಕೆಲವರು ಮಾಫಿಯಾಕ್ಕೆ ನೆರವಾದ ಆರೋಪಕ್ಕೆ ಗುರಿಯಾಗಿದ್ದಾರೆ.ಬೆಂಗಳೂರು ಉತ್ತರ ತಾಲೂಕಿನ ಸಜ್ಜೆಪಾಳ್ಯ ಸರ್ವೆ ನಂಬರ್ 15 ರಲ್ಲಿ 96 ಎಕರೆ ಜಾಗ ಒಕ್ಕಲಿಗರ ಸಂಘದ ಸ್ವತ್ತು ಆಗಿದೆ. ಆದ್ರೆ ಇದೀಗ 1500 ಕೋಟಿ ಈ ಸ್ವತ್ತಿನ ಮೇಲೆ ಕೆಲ ನಿರ್ದೇಶಕರು ಹಾಗೂ ಹಾಲಿ ಅಧ್ಯಕ್ಷ ಹನುಮಂತಯ್ಯ ಕಣ್ಣು ಇಟ್ಟಿದ್ದು, ಲಪಟಾಯಿಸುವ ಯತ್ನ ನಡೆಯುತ್ತಿದೆ ಅಂತ ಒಕ್ಕಲಿಗರ ಸಂಘದ ಆಸ್ತಿ ಉಳಿವಿನ ಹೋರಾಟ ಸಮಿತಿ ಆರೋಪ ಮಾಡ್ತಿದೆ.
1962 ರಲ್ಲಿ ರಂಗಮ್ಮ ಎನ್ನುವರು ಒಕ್ಕಲಿಗರ ಸಂಘಕ್ಕೆ ದಾನವಾಗಿ ನೀಡಿದ್ರು. ಆದ್ರೆ ಇದೀಗ ಆಸ್ತಿಯನ್ನ ಸಮುದಾಯದ ಶೈಕ್ಷಣಿಕ ವಿಷಯಗಳಿಗೆ ಬಳಕೆ ಮಾಡಿಕೊಳ್ಳಬಹುದು. ಆದ್ರೆ ಕೆಲ ನಿರ್ದೇಶಕರುಗಳು ಬಿಲ್ಡರ್ಸ್ ಗಳ ಜೊತೆ ಸೇರಿಕೊಂಡು ಲೇಔಟ್ ಮಾಡ್ತಿದ್ದಾರೆ.ಕೂಡಲೇ ಸಮುದಾಯದ ನಾಯಕರುಗಳನ್ನ ಗಮನಹರಿಸಿ ಸಜ್ಜೆಪಾಳ್ಯ ಆಸ್ತಿ ಉಳಿಸುವ ಪ್ರಯತ್ನ ಮಾಡಬೇಕು. ಇಲ್ಲದ್ರೆ ನಮ್ಮ ಹೋರಾಟ ತೀವ್ರವಾಗ್ತದೆ ಅಂತ ಸಂಘದ ಆಸ್ತಿ ಉಳಿವಿನ ಹೋರಾಟ ಸಮಿತಿ ಎಚ್ಚರಿಸಿದೆ.
ಒಟ್ಟಿನಲ್ಲಿ ಒಕ್ಕಗರ ಸಂಘದಲ್ಲಿ ಕೋಟ್ಯಾಂತರ ರೂ ಮೌಲ್ಯದ ಆಸ್ತಿಪಾಸ್ತಿಗಳಿವೆ ಇದನ್ನ ಲೂಟಿ ಮಾಡಬೇಕೆಂದು ಕೋಟಿ ಕೋಟಿ ಖರ್ಚು ಮಾಡಿ ಸಂಘದ ನಿರ್ದೇಶಕರು ಅಧ್ಯಕ್ಷರು ಆಗ್ತಾರೆ.ಸಮುದಾಯದ ಹೆಸರಿನಲ್ಲಿ ಕೋಟಿ ಕೋಟಿ ನುಂಗಿರೋ ಉಹಾಹರಣೆಗಳಿವೆ. ಆದ್ರೆ . ತಿಂದು, ತೇಗಿದ ಯಾವೊಬ್ಬನಿಗೂ ಪ್ರಾಪಪ್ರಜ್ಞೆ ಕಾಡುತ್ತಲೇ ಇಲ್ಲ. ಪಶ್ಚಾತಾಪದ ಗೋಜಿಗೂ ಹೋಗುತ್ತಿಲ್ಲ. ಬಂದ ಆರೋಪಗಳಿಗೆಲ್ಲಾ ನಾನವನಲ್ಲ… ನಾನವನಲ್ಲ… ಎನ್ನುವ ಬುದ್ಧಿವಂತ ಸಿನಿಮಾ ಡೈಲಾಗ್ ಹೊಡೆಯುತ್ತಲೇ ಮುಂದೆ ಸಾಗುತ್ತಿದ್ದಾರೆ.ಇನ್ನಾದ್ರೂ ಸಂಘದಲ್ಲಿ ನಡೆಯುತ್ತಿರೋ ಅಕ್ರಮಗಳಿಗೆ ಸಮುದಾಯದ ಮುಖಂಡಗಳು ಕಡಿವಾಣ ಹಾಕ್ತಾರಾ ಅನ್ನೋದನ್ನ ಕಾದುನೋಡಬೇಕಿದೆ