ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಬ್ಯಾಂಕ್ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳ (ಎನ್ಬಿಎಫ್ಸಿ) ಅಸುರಕ್ಷಿತ ಸಾಲದ ಪೋರ್ಟ್ಫೋಲಿಯೊಗಳಿಗೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಈ ಸಾಲದ ವರ್ಗಗಳಲ್ಲಿ ಅಸಹಜವಾಗಿ ಹೆಚ್ಚಿನ ಬೆಳವಣಿಗೆಯ ಆತಂಕಗಳ ನಡುವೆ ಈ ನಿರ್ಧಾರವನ್ನು ಮಾಡಿದೆ. ಭಾರತೀಯ ಬ್ಯಾಂಕುಗಳು ಅಸುರಕ್ಷಿತ ಸಾಲಗಳಲ್ಲಿ ತೀವ್ರ ಏರಿಕೆ ಕಂಡಿವೆ.
ಅದರಲ್ಲಿ ಹೆಚ್ಚಾಗಿ ವೈಯಕ್ತಿಕ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ಗಳ ಸಾಲದ್ದಾಗಿವೆ. ಇದು ಕಳೆದ ವರ್ಷದಲ್ಲಿ ಸುಮಾರು 15% ರ ಒಟ್ಟಾರೆ ಬ್ಯಾಂಕ್ ಕ್ರೆಡಿಟ್ ಬೆಳವಣಿಗೆಯನ್ನು ಇದು ಮೀರಿಸಿದ್ದು, ಇದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗಮನವನ್ನು ಸೆಳೆದಿದೆ. ಆರ್ಬಿಐ ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳಿಗೆ ರಿಸ್ಕ್ ವೇಯ್ಟ್ಅನ್ನು ಅಥವಾ ಪ್ರತಿ ಸಾಲಕ್ಕೆ ಬ್ಯಾಂಕುಗಳು ಮೀಸಲಿಡಬೇಕಾದ ಬಂಡವಾಳವನ್ನು 25 ಶೇಕಡಾ ಪಾಯಿಂಟ್ಗಳಿಗೆ ಏರಿಸಿದೆ. ಇದರರ್ಥ ಚಿಲ್ಲರೆ ಸಾಲಗಳ ಮೇಲೆ ರಿಸ್ಕ್ ವೇಯ್ಟ್ ಪ್ರಮಾಣ 125% ಕ್ಕೆ ಹೆಚ್ಚಿಸಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.
https://ainlivenews.com/what-happens-if-tea-coffee-is-given-to-children/
ಬ್ಯಾಂಕ್ಗಳಿಗೆ, ಹೊಸ ರಿಸ್ಕ್ ವೇಯ್ಟ್ ವೈಯಕ್ತಿಕ ಸಾಲಗಳಿಗೆ ಮತ್ತು ಎನ್ಬಿಎಫ್ಸಿಗಳಿಗೆ ಚಿಲ್ಲರೆ ಸಾಲಗಳಿಗೆ ಅನ್ವಯಿಸುತ್ತದೆ, ವಸತಿ, ಶಿಕ್ಷಣ ಮತ್ತು ವಾಹನ ಸಾಲಗಳು ಮತ್ತು ಚಿನ್ನ ಮತ್ತು ಚಿನ್ನಾಭರಣಗಳಿಂದ ಪಡೆದ ಸಾಲಗಳನ್ನು ಇದರಿಂದ ಹೊರಗಿಡಲಾಗುತ್ತದೆ ಎಂದು ತಿಳಿಸಿದೆ. ಆರ್ಬಿಐ ಗುರುವಾರ ಕ್ರೆಡಿಟ್ ಕಾರ್ಡ್ ಮಾನ್ಯತೆಗಳಲ್ಲಿನ ರಿಸ್ಕ್ ವೇಯ್ಟ್ಅನ್ನು ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳಿಗೆ ಕ್ರಮವಾಗಿ 150% ಮತ್ತು 125% ಕ್ಕೆ 25 ಶೇಕಡಾ ಪಾಯಿಂಟ್ಗಳಿಂದ ಹೆಚ್ಚಿಸಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕಳೆದ ತಿಂಗಳು ಕೇಂದ್ರ ಬ್ಯಾಂಕ್ ಕೆಲವು ವೇಗವಾಗಿ ಬೆಳೆಯುತ್ತಿರುವ ವೈಯಕ್ತಿಕ ಸಾಲದ ವರ್ಗಗಳನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಹೇಳಿದ್ದರು. ಆರ್ಬಿಐ ವಿಶೇಷವಾಗಿ 10,000 ರೂ.ವರೆಗಿನ ಸಣ್ಣ ವೈಯಕ್ತಿಕ ಸಾಲಗಳ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ, ಇದನ್ನು ಮೂರರಿಂದ ನಾಲ್ಕು ತಿಂಗಳವರೆಗೆ ತೆಗೆದುಕೊಳ್ಳಲಾಗುತ್ತದೆ.