ನೆಲಮಂಗಲ: ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಅರೆ ಬರೆಯಾಗಿ ಬಂದ ಗ್ಯಾಂಗ್ ಮನೆಯ ಬೀಗ ಹೊಡೆದು ಕಳ್ಳತನ ಮಾಡಿರುವ ಘಟನೆ ಜರುಗಿದೆ. ಮನೆಯಲ್ಲಿ ಯಾರೂ ಇಲ್ಲದನ್ನ ಗಮನಿಸಿ ಈ ಗ್ಯಾಂಗ್ ಹೊಂಚು ಹಾಕಿದೆ.
ಮನೆಯಲ್ಲಿದ್ದ ಚಿನ್ನಾಭರಣ ನಗದು ದೋಚಿ ಪರಾರಿ ಆಗಿದ್ದಾರೆ. ನೆಲಮಂಗಲ ನಗರದ ಮಾರುತಿ ನಗರದಲ್ಲಿ ಘಟನೆ ಜರುಗಿದೆ. ಮನೆಯವರು ಹಬ್ಬದ ನಿಮಿತ್ತ ಊರಿಗೆ ತೆರಳಿದ್ದಾಗ ಕೃತ್ಯ ಎಸಗಲಾಗಿದೆ. ರಾಯದುರ್ಗ ಮೂಲದ ಹನುಮಂತ ರೆಡ್ಡಿ ಎಂಬುವವರ ಮನೆಯಲ್ಲಿ ಘಟನೆ ಜರುಗಿದೆ. ಕಳ್ಳರ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Video Player
00:00
00:00
ಕಳೆದ ರಾತ್ರಿ ನಡೆದಿರುವ ಘಟನೆ ಅಕ್ಕಪಕ್ಕದ ಮನೆಯವರು ನೋಡಿದಾಗ ಬೆಳಕಿಗೆ ಬಂದಿದೆ. 95 ಗ್ರಾಂ ಚಿನ್ನಾಭರಣ 1.50 ಲಕ್ಷ ಹಣ ದೋಚಿ ಕಳ್ಳರು ಎಸ್ಕೆಎಫ್ ಆಗಿದ್ದಾರೆ. ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.