ಹಾಸನ:– ರಾಜಕಾರಣದಲ್ಲಿ ಕಾಫಿ, ಡಿನ್ನರ್ಗೆ ಬಹಳ ಮಹತ್ವವಿದೆ ಎಂದು ಶಾಸಕ ರವಿ ಗಣಿಗ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾವು 136 ಜನ ಒಗ್ಗಟ್ಟಾಗಿರುವಾಗ ಬಿಜೆಪಿಯವರು ಬಲೆಗೆ ಬೀಳಲ್ಲ. ನಮ್ಮ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಬರ್ತಿನಿ ಅಂದ್ರೆ ಯಾಕೆ ಬೇಡ ಅನ್ನಬೇಕು. ಬೇಡ ಅನ್ನಲು ಆಗುತ್ತಾ! ನಮ್ಮ ಪಕ್ಷಕ್ಕೆ ಬರುವವರಿಗೆ ಸ್ವಾಗತ ಇದೆ. ಆದರೆ ನಾವು ಯಾರ ಮನೆಗೂ ಹೋಗಿ ಕರಿತಿಲ್ಲ, ಬರ್ತಿನಿ ಅಂತಿದ್ಧಾರೆ ನಾವು ಸ್ವಾಗತ ಮಾಡುತ್ತಿದ್ದೇವೆ ಅಷ್ಟೆ.
ಬಿಜೆಪಿ-ಜೆಡಿಎಸ್ನಿಂದ ಶಾಸಕರು ಬರ್ತಾರೆ. ಅವರಲ್ಲಿ ಶರಣಗೌಡ ಕಂದಕೂರು ಕಾಂಗ್ರೆಸ್ಗೆ ಬನ್ನಿ ಅಂತ ಹೇಳಿಲ್ಲ. ಎಲ್ಲರೂ ಹಾಸನದಲ್ಲಿ ಇರಬೇಕಾದರೆ ಅವರು ನನ್ನ ಜೊತೆ ಕಾಫಿ ಕುಡಿಯುತ್ತಿದ್ದರು. ನಮ್ಮ ಪಕ್ಷಕ್ಕೆ ಬರ್ತರೆ ಅಂಥ ಹೇಳಲಿಲ್ಲ. ಕಾಫಿ ಕುಡಿಯುತ್ತಿದ್ದರು ಅಂತ ಹೇಳಿದೆ. ಅವರು ನನ್ನ ಗೆಳೆಯ, ರಾಜಕಾರಣದಲ್ಲಿ ಕಾಫಿ ಡಿನ್ನರ್ಗೆ ಬಹಳ ಮಹತ್ವವಿದೆ ಎಂದು ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದರ ಬಗ್ಗೆ ಒಗಟಾಗಿ ಹೇಳಿದಂತಿತ್ತು.
ಈಗಾಗಲೇ ಹೈಕಮಾಂಡ್ ಅವರು ಏನು ಮಾತನಾಡಬಾರದು ಅಂತ ಹೇಳಿದ್ದಾರೆ. ಆದ್ದರಿಂದ ಆ ವಿಚಾರ ಅಲ್ಲಿಗೆ ಬಿಟ್ಟು ಇನ್ನೇನಿದ್ದರು ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದೇವೆ. ಅದೆಲ್ಲ ಮುಗಿದ ಅಧ್ಯಾಯ, 136 ಶಾಸಕರು ಸಿಎಂ, ಡಿಸಿಎಂ, ಪರಮೇಶ್ವರ್, ಸತೀಶ್ ಜಾರಕಿಹೊಳಿ, ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷದ ಜೊತೆ ಇದ್ದೇವೆ. ಯಾವ ಭಿನ್ನಮತ, ಗೊಂದಲ ಇಲ್ಲ, ಏನು ಇಲ್ಲ. ಹಾಸನಾಂಬೆ ಆಶೀರ್ವಾದದಿಂದ ಎಲ್ಲಾ ಚೆನ್ನಾಗಿದ್ದೇವೆ ಎಂದು ಹೇಳಿದ್ದಾರೆ