ಬೆಂಗಳೂರು: ಟಿಕೆಟ್ ಮಷೀನ್ ಕೈಕೊಟ್ಟ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿರುವ ಒಂದೇ ಒಂದು ಬಸ್ಸು ಹೊರಗಡೆ ಹೋಗದೆ ಸಾರ್ವಜನಿಕರು ಪರದಾಟ ನಡೆಸಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ
ರಾಜ್ಯಾಧ್ಯಕ್ಷ ಪಟ್ಟ: ನಿರ್ಮಲನಂದನಾಥ ಶ್ರೀ ಆಶೀರ್ವಾದ ಪಡೆದ BY ವಿಜಯೇಂದ್ರ
ಇಂದು ಮುಂಜಾನೆ ಟಿಕೆಟ್ ಜನರೇಟರ್ ಹಾಕದೆ ಹಿನ್ನೆಲೆಯಲ್ಲಿ ಕೆಲವೊಂದು ಭಾಗಕ್ಕೆ ಕೆಎಸ್ಆರ್ಟಿಸಿ ಬಸ್ವಾಗದೆ ಸ್ಥಳೀಯರು ಸಾರ್ವಜನಿಕರು ಉದ್ಯೋಗಸ್ಥರು ದೂರದ ಪ್ರಯಾಣ ಬಳಸುವ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲವನ್ನು ಉಂಟು ಮಾಡಿತು.. ಇನ್ನು ರಾಮನಗರ ವಿಭಾಗದ ಆನೇಕಲ್ ಡಿಪ್ಪೋ ದಲ್ಲಿ ಟೆಕ್ನಿಕಲ್ ಪ್ರಾಬ್ಲಮ್ ನಿಂದ ಬೆಳಗ್ಗೆ ನಾಲ್ಕು ಗಂಟೆಯಿಂದ ಒಂಬತ್ತು ಗಂಟೆಯವರೆಗೂ ಕೆಎಸ್ಆರ್ಟಿಸಿ ಬಸ್ಗಾಗಿ ಜನರು ಪರದಾಡುವಂತೆ ಪರಿಸ್ಥಿತಿ ಎದರಗಿತ್ತು..
ಇನ್ನು ಕೆ ಎಸ್ ಆರ್ ಟಿ ಸಿ ಬಸ್ ಬಾರದ ಹಿನ್ನೆಲೆಯಲ್ಲಿ ಆನೇಕಲ್ ಜನತೆ ಅಧಿಕಾರಿಗಳೇ ಇಡಿ ಶಾಪವನ್ನು ಹಾಕಿದ್ದರು. ಇನ್ನು ಬಸ್ಸಿಲ್ಲದ ಪರಿಣಾಮ ಬಸ್ ಸ್ಟಾಂಡ್ ನಲ್ಲಿ ಜನರು ಕೂಡ ತುಂಬಿ ತುಳುಕುತ್ತಿದ್ರು . ಇನ್ನು ಆನೆಕಲ್ ನಿಂದ ತಮಿಳುನಾಡು ಹೊಸೂರು ತಮಿಳುನಾಡಿನ ತಳಿ, ಬೆಂಗಳೂರು ರಾಮನಗರ ಮಾದೇಶ್ವರ ಬೆಟ್ಟ ಸಂಪರ್ಕ ಕಲ್ಪಿಸುವ ಮಾರ್ಗ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಒಳಗಾಗಿದ್ರು ಏನು ಪರಿಸ್ಥಿತಿ ಅರ್ಥ ಕೆಎಸ್ಆರ್ಟಿಸಿ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರು