ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ ಮುಂದಿನ ಎರಡು ದಿನಗಳನ್ನು ಸೇರಿಸಿ 5 ದಿನ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ . ಆದರೆ ನಿಮಗೆ ಗೊತ್ತಾ, ಭಾರತದ ಈ 2 ಸ್ಥಳಗಳಲ್ಲಿ ದೀಪಾವಳಿಯನ್ನು ಆಚರಿಸುವುದಿಲ್ಲ. ಆಶ್ಚರ್ಯ ಹಾಗೂ ಅಚ್ಚರಿಯಾಗಬಹುದು .
ದೀಪಾವಳಿಯನ್ನು ಭಾರತದ ಕೇರಳ ರಾಜ್ಯದಲ್ಲಿ ಮತ್ತು ಕರ್ನಾಟಕದ ಮೇಲುಕೋಟೆಯಲ್ಲಿ ಆಚರಿಸುವುದಿಲ್ಲ.ಕಾರಣವೇನಿರಬಹುದು ಅಂತೀರಾ ಇಲ್ಲಿದೆ ಡಿಟೇಲ್ಸ್!
ಕೇರಳ ರಾಜ್ಯದಲ್ಲಿ ದೀಪಾವಳಿ ಹಬ್ಬ ಆಚರಿಸದೇ ಇರಲು ಕಾರಣವಿದೆ. ಅದೇನೆಂದರೆ, ಕೇರಳದ ರಾಜ ಮಹಾಬಲಿ ದೀಪಾವಳಿಯ ದಿನದಂದು ನಿಧನರಾದರು ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಇಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವುದಿಲ್ಲ.
ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಮೇಲುಕೋಟೆಯು ಸುಮಾರು 200 ವರ್ಷಗಳಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿಲ್ಲ. ಇದು 800 ಅಯ್ಯಂಗಾರ್ ಬ್ರಾಹ್ಮಣರ ಹತ್ಯೆಯ ಕಥೆಯನ್ನು ವಿವರಿಸುತ್ತದೆ.
ಟಿಪ್ಪು, ಹಿಂದೂಗಳ ಮೇಲಿನ ದ್ವೇಷದಿಂದ ಅವನು ಇಡೀ ಸಮುದಾಯದ ಹತ್ಯಾಕಾಂಡಕ್ಕೆ ಆದೇಶಿಸಿದನು. ಸುಮಾರು 700 ರಿಂದ 800 ಕ್ಕೂ ಹೆಚ್ಚು ಅಯ್ಯಂಗಾರ್ ಬ್ರಾಹ್ಮಣರನ್ನು ಟಿಪ್ಪು ಸೈನ್ಯವು ಕೊಂದು ಹಾಕಿದರು.