ವಿಶ್ವಕಪ್ ಟೂರ್ನಿಯ 42ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್ಗಳ ಜಯ ದಾಖಲಿಸಿತು. ಈಗಾಗಲೇ ಹರಿಣಗಳ ಪಡೆ ಸಮೀಸ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರೆ, ಆಫ್ಘಾನ್ ಸೋಲಿನೊಂದಿಗೆ ಗ್ರೂಪ್ ಹಂತದ ಲೀಗ್ ಅಭಿಯಾನವನ್ನು ಕೊನೆಗೊಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಫ್ಘಾನ್ ಪಡೆ ನಿಗದಿತ 50 ಓವರ್ಗಳಲ್ಲಿ 50 10 ವಿಕೆಟ್ ನಷ್ಟಕ್ಕೆ 244 ರನ್ ಕಲೆಹಾಕಿತು. ತಂಡದ ಪರ ಅಜ್ಮತುಲ್ಲಾ ಒಮರ್ಜಾಯ್ (97 ರನ್, 107 ಎಸೆತ, 7 ಬೌಂಡರಿ, 3 ಸಿಕ್ಸರ್) ಹೊರತುಪಡಿಸಿದರೆ, ಉಳಿದ ಯಾವೊಬ್ಬ ಬೌಲರ್ಗಳು ಕೂಡ ನಿರೀಕ್ಷಿತ ಪ್ರದರ್ಶನವನ್ನು ನೀಡಲಿಲ್ಲ.
ದಕ್ಷಿಣ ಆಫ್ರಿಕಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಜೆರಾಲ್ಡ್ ಕೊಯೆಟ್ಜಿ ಪ್ರಮುಖ 4 ವಿಕೆಟ್ ಕಬಳಿಸಿದರು. ಉಳಿದಂತೆ ಲುಂಗಿ ಎನ್ಗಿಡಿ ಮತ್ತು ಕೇಶವ್ ಮಹಾರಾಜ್ ತಲಾ ಎರಡೆರಡು ವಿಕೆಟ್ ಕಬಳಿಸಿದರೆ, ಆಂಡಿಲೆ ಫೆಹ್ಲುಕ್ವಾಯೊ ಒಂದು ವಿಕೆಟ್ಗೆ ತೃಪ್ತಿಪಟ್ಟುಕೊಂಡರು.
ಆಫ್ಘಾನ್ ಪಡೆ ನೀಡಿದ 245 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ, 47.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 247 ರನ್ ಕಲೆಹಾಕುವ ಮೂಲಕ ಜಯ ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಇನ್ನೂ ಎರಡು ಅಂಕಗಳೊಂದಿಗೆ 14 ಅಂಕ ಪಡೆದು ಎರಡನೇ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿತು. ತಂಡದ ಪರ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (76), ಕ್ವಿಂಟನ್ ಡಿಕಾಕ್ (41) ಹಾಗೂ ಆಂಡಿಲೆ ಫೆಹ್ಲುಕ್ವಾಯೊ (39) ಉತ್ತಮ ಪ್ರದರ್ಶನ ನೀಡಿದರು.