ಇಸ್ಲಾಮಾಬಾದ್:- ಪಾಕಿಸ್ತಾನದ 90 ಮಂದಿ ಸೈನಿಕರ ಹತ್ಯೆ ಮಾಡಲಾಗಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ ಘೋಷಣೆ ಮಾಡಿದೆ.
ಫುಡ್ ಫಾಯ್ಸನ್ನಿಂದ ವಿದ್ಯಾರ್ಥಿ ಸಾವು ಪ್ರಕರಣ ; ವಸತಿ ಶಾಲೆ ಆಡಳಿತ ಮಂಡಳಿ ವಿರುದ್ಧ ಕೇಸ್
ಭಾರತದ ಸೈನಿಕರನ್ನು ಪುಲ್ವಾಮ ದಲ್ಲಿ ಯ ಉಗ್ರರು ಹೇಗೆ ಗುರಿ ಮಾಡಿ ಕೃತ್ಯ ಎಸಗಿದ್ದರೋ ಅದೇ ರೀತಿಯಾಗಿ ಇಂದು ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ 40 ರಲ್ಲಿ ಸೈನಿಕರಿದ್ದ ಬಸ್ಸಿಗೆ ಸ್ಪೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯಾದ ಬೆನ್ನಲ್ಲೇ ಕಾರು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆ ಬಸ್ಸಿನ ಕಿಟಕಿ ಗಾಜುಗಳು ಒಡೆದು ಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಛಿದ್ರಗೊಂಡಿರುವ ಬಸ್ಸಿನ ವಿಡಿಯೋ ವೈರಲ್ ಆಗಿದೆ
ಬಲೂಚ್ ಲಿಬರೇಶನ್ ಆರ್ಮಿ ಈ ಘಟನೆಯಲ್ಲಿ 90 ಮಂದಿ ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದರೆ ಪಾಕ್ ಸೇನೆ 12 ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.