ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ (Kaun Banega Crorepati) ಶೋ ಇದೀಗ 15ನೇ ಆವೃತ್ತಿ ಪ್ರಸಾರವಾಗಿದೆ. ಇದೇ ಮೊದಲ ಬಾರಿಗೆ ಈ ಶೋನಲ್ಲಿ 14 ವರ್ಷದ ಹುಡುಗನ ಕೋಟಿ ರೂಪಾಯಿ ಸಿಕ್ಕಿದೆ. 16 ನೇ ಪ್ರಶ್ನೆಗೆ ಸರಿಯಾಗಿ ಉತ್ತರಿಸುವ ಮೂಲಕ ಒಂದು ಕೋಟಿ ರೂಪಾಯಿ ಪಡೆದಿದ್ದಾನೆ ಹರಿಯಾಣದ ಮಹೇಂದ್ರ ಗಡ್ ಮಾಯಾಂಕ್.
ಮಾಯಾಂಕ್ (Mayank) ಸದ್ಯ 8ನೇ ತರಗತಿ ಓದುತ್ತಿದ್ದಾನೆ. ಈ ಸೀಸನ್ ನಲ್ಲಿ ಒಂದು ಕೋಟಿ ರೂಪಾಯಿ ಪಡೆಯುವ ಮೂಲಕ ದಾಖಲೆ ಬರೆದಿದ್ದಾನೆ. ಒಂದು ಕೋಟಿ ರೂಪಾಯಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿ ಅವನಾಗಿದ್ದಾನೆ. ಲೀಲಾ ಜಾಲವಾಗಿ 15 ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಕೇವಲ ಒಂದು ಕೋಟಿಗೆ ಮಾತ್ರವಲ್ಲ, ಏಳು ಕೋಟಿಗೂ ಗುರಿಯಿಟ್ಟು ಆಟವಾಡಲು ಮುಂದಾದ. ಆದರೆ, ಏಳು ಕೋಟಿ ಪ್ರಶ್ನೆಗೆ ಉತ್ತರಿಸೋಕೆ ಆಗದೇ ಆಟದಿಂದ ವಾಪಸ್ಸಾದ. ಈ ಹುಡುಗನ ಸಾಧನೆಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅಭಿನಂದಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.