ಚಿತ್ರದುರ್ಗ: ದಾಖಲೆ ಇಲ್ಲದೆ ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು ಎಂಟು ಕೋಟಿ ಹಣವನ್ನು ಹೊಳಲ್ಕೆರೆ ಪೊಲೀಸರು ಜಪ್ತಿ ಮಾಡಿದ್ದಾರೆ. ಹೊಳ್ಕೆರೆಯಿಂದ ಶಿವಮೊಗ್ಗಾಕ್ಕೆ ಹೋಗುತ್ತಿದ್ದ ಇನ್ನೋವಾ ಕಾರನ್ನು ದುಮ್ಮಿ ಬಳಿ ತಡೆದು ಪರಿಶೀಲಿಸಿದಾಗ ದಾಖಲೆ ಇಲ್ಲದೆ ಎಂಟು ಕೋಟಿ ರೂಪಾಯಿಗಳನ್ನು ಸಾಗಿಸಲಾಗುತ್ತಿತ್ತು.
ಇಷ್ಟೊಂದು ಹಣವನ್ನು ಅಡಿಕೆ ವ್ಯಾಪಾರಿ ಉದಯ್ ಶೆಟ್ಟಿ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಜಪ್ತಿ ಮಾಡಿದ ಹಣವನ್ನು ಪೊಲೀಸರು ತಂದು ಪರಿಶೀಲಿಸುತ್ತಿದ್ದು, ಅದಕ್ಕೆ ದಾಖಲೆಯನ್ನು ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ.