ಕೆ.ಆರ್.ಪುರ: ಕಿತ್ತೂರು ರಾಣಿಚೆನ್ನಮ್ಮ ಮಹಿಳಾ ಆಟೋ ಚಾಲಕಿಯರ ಸಂಘದ ವತಿಯಿಂದ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆಮೋಹನ್ ಹಾಗೂ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆಮೋಹನ್ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡಿದ ಶಿಶುಮಂದಿರ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಕನ್ನಡ ಭಾಷೆ ಉಳಿಸಿ ಬೆಳಸುವ ಕಾರ್ಯ ಮಾಡುವ ಕೆಲಸ ನಾವೆಲ್ಲಾರೂ ಮಾಡಬೇಕು ಎಂದು ತಿಳಿಸಿದರು.
69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿಚನ್ನಮ್ಮ ಆಟೋ ಚಾಲಕಿಯರ ಮಹಿಳೆಯರಿಗೆ ಸೀರೆ ಹಾಗೂ ಸಿಹಿ ಹಂಚಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಕರ್ನಾಟಕದಲ್ಲಿ ಕನ್ನಡಿಗರ ಜೊತೆಗೆ ಬೇರೆ ಭಾಷಿಕರೂ ಜೀವನ ಮಾಡುತ್ತಿದ್ದಾರೆ. ಕನ್ನಡಿಗರು ಧಾರಾಳವಾಗಿ ಇತರೆ ಭಾಷಿಕರಿಗೆ ಆಶ್ರಯ, ಸೌಹಾರ್ದ ತೋರಿದ್ದಾರೆ. ಇಲ್ಲಿನ ಭಾಷೆ, ನೆಲ, ಜಲ ವಿಚಾರದಲ್ಲಿ ಕನ್ನಡಿಗರಂತೆಯೇ ಪರಭಾಷಿಕರ ಭಾವನೆಯೂ ಇರಬೇಕು. ಮನೆಯಲ್ಲಿ ಯಾವುದೇ ಭಾಷೆಯನ್ನು ಮಾತನಾಡಿ. ಆದರೆ, ಹೊರಗೆ ಬಂದಾಗ ಕನ್ನಡ ಭಾಷೆಯನ್ನು ಮಾತನಾಡಿ ಇಲ್ಲಿನ ಜನರಿಗೂ ಗೌರವ ನೀಡಬೇಕು ಎಂದು ಹೇಳಿದರು.
ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ, ಮಹಿಳೆಯರ ಸಾಧನೆಗೆ ಸಂಘಸಂಸ್ಥೆಗಳು ಕೈಜೋಡಿಸುವಂತೆ ಸಲಹೆ ನೀಡಿದರು. ನಂತರ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ ಮಹಿಳೆಯ ಸರ್ವತೋಮುಖ ಬೆಳವಣಿಗೆಗೆ ಕುಟುಂಬ ಹಾಗೂ ಸ್ನೇಹಿತರ ಬಳಗ ಸಹಕಾರ ನೀಡುವ ಕಾರ್ಯ ಮಾಡಬೇಕೆಂದು ನುಡಿದರು.
ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಅನ್ಯ ರಾಜ್ಯದವರಿಗೆ ಪ್ರೀತಿಯಿಂದ ಕನ್ನಡ ಕಲಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು. ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ, ಅಭಿಮಾನ ಬೆಳೆಸಿಕೊಳ್ಳಬೇಕು. ಕರ್ನಾಟಕ ಏಕೀಕರಣವಾಗಲು ಅನೇಕರ ತ್ಯಾಗ, ಹೋರಾಟ, ಪರಿಶ್ರಮವಿದೆ ಎಂದರು. ಮಾಜಿ ಪಾಲಿಕೆ ಸದಸ್ಯ ವೀರಣ್ಣ, ಶಿಶುಮಂದಿರ ಸಂಸ್ಥೆಯ ಆನಂದ್,ಸುಬ್ರಹ್ಮಣಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಗೌಡ ಇದ್ದರು.