ತುಮಕೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 6 ಜನ ಮೃತಪಟ್ಟಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಆಸ್ಪತ್ರೆಯ ಶವಾಗಾರಕ್ಕೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದಿಂದ ಸಿಂಧೂ ಅವ್ರ ಪುತ್ರ ವೇದಾಸ್ ರೆಡ್ಡಿ, ಜನಾರ್ದನ್ ರೆಡ್ಡಿ, ಕಾರು ಚಾಲಕ ಆನಂದ್ ಹಾಗೂ ಗೀತಾ ಯೋದಾ ಮತ್ತು ಟ್ರಯಾಂಗ್ ದೇವ್ ಸೇರಿ ಒಟ್ಟು 7 ಮಂದಿ ಹಬ್ಬ ಮುಗಿಸ್ಕೊಂಡು ಬೆಂಗಳೂರಿನ ಜೆಪಿ ನಗರ ಕಡೆ ಪ್ರಯಾಣ ಬೆಳೆಸಿದ್ರು.
ನಿಮ್ಮ ಅಂಗೈನ ಈ ಭಾಗದಲ್ಲಿ ಮಚ್ಚೆಗಳಿದ್ದರೆ ಏನರ್ಥ: ಜ್ಯೋತಿಷ್ಯ ಹೇಳೋದೇನು ನೋಡಿ
ಮತ್ತೊಂದ್ಕಡೆ ನಾಗರಾಜ್ ಹಾಗೂ ಸಿದ್ಧಗಂಗಾ ಅನ್ನೋರು ಟಿಯಾಗೋ ಕಾರಿನಲ್ಲಿ ಬೆಂಗಳೂರು ಕಡೆಯಿಂದ ಮಧುಗಿರಿ ಕಡೆಗೆ ತೆರಳುತ್ತಿದ್ರು. ಆದ್ರೆ ಮಧುಗಿರಿ ತಾಲೂಕಿನ ಕಾಟಗಾನಹಟ್ಟಿ ಬಳಿ ಎರಡು ಕಾರ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅಪಘಾತದ ರಭಸಕ್ಕೆ ಮಾರುತಿ ಸಿಯಾಜ್ಕಾರ್ನಲ್ಲಿದ್ದ 33 ವರ್ಷದ ಸಿಂಧೂ ಅವರ ಪುತ್ರ 12 ವರ್ಷದ ವೇದಾಸ್ ರೆಡ್ಡಿ, 30 ವರ್ಷದ ಆನಂದ್, 60 ವರ್ಷದ ಜನಾರ್ದನ ರೆಡ್ಡಿ ಸಾವನಪ್ಪಿದ್ದಾರೆ. ಇನ್ನು ಟಿಯಾಗೋ ಕಾರಿನಲ್ಲಿದ ಪಿಗ್ಮಿ ಕಲೆಕ್ಟರ್ ನಾಗರಾಜ್ ಮತ್ತು ಸಿದ್ಧಗಂಗಾ ಅನ್ನೋರು ಸಾವನಪ್ಪಿದ್ದಾರೆ.