ಬೆಂಗಳೂರು: ದಾಸ ಶ್ರೇಷ್ಠರಾದ ಸಂತ ಕನಕದಾಸರ ಜಯಂತಿ ಅಂಗವಾಗಿ ಇಂದು ಜಾತ್ಯತೀತ ಜನತಾದಳ ಪಕ್ಷದ ಕೇಂದ್ರ ಕಚೇರಿಯಾದ ಜೆಪಿ ಭವನದಲ್ಲಿ 536ನೇ ಕನಕದಾಸರ ಜಯಂತೊತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು!
ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ಮುಖ್ಯ ಅಥಿತಿಯಾಗಿ ಭಾಗವಹಿಸಿ ಕನಕ ದಾಸರ ಜಯಂತಿಯನ್ನು ಆಚರಿಸಲಾಯಿತು ಹಾಗೆ ಮಾತನಾಡಿದ ಅವರು, ಸಮಸ್ತ ಜನತೆಗೆ ದಾಸ ಶ್ರೇಷ್ಠರಾದ, ಸಂತ ಕನಕದಾಸರ ಜಯಂತಿಯ ಶುಭಾಶಯಗಳು. ಸಮಾಜದ ಮೇಲು, ಕೀಳು, ಜಾತಿ, ಮತ ಸಿದ್ಧಾಂತದ ವಿರುದ್ಧ ಪ್ರತಿಭಟನಾ ನೆಲೆಗಟ್ಟಿನಲ್ಲಿ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ತಂದರು. ಅವರು ಸಾರಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವರ ನೀಡಿದ ಆದರ್ಶ ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ MLC ಶ್ರೀ ತಿಪ್ಪೇಸ್ವಾಮಿ, CM ನಾಗರಾಜ್ ಸೇರಿದಂತಹ ಹಲವಾರು ಜೆಡಿಎಸ್ ಪಕ್ಷದ ನಾಯಕರು ಉಪಸ್ಥಿತಿಯಲ್ಲಿದ್ದರು.