ತಮಿಳುನಾಡು: ಮನೆಯೊಂದರಲ್ಲಿ ಪುರಾತನವಾದ ವಿಗ್ರಹಗಳನ್ನು ಇಡಲಾಗಿದೆ ಎಂಬ ಮಾಹಿತಿ ಆಧಾರದ ಮೇಲೆ ಸಿಐಡಿ ದಾಳಿ ನಡೆಸಿದೆ. ಆ ವೇಳೆ ಪೊಲೀಸರು 500 ಕೋಟಿ ಮೌಲ್ಯದ ಪಚ್ಚೆ ಲಿಂಗವನ್ನು ಬ್ಯಾಂಕ್ ಲಾಕರ್ವೊಂದರಿಂದ ವಶಕ್ಕೆ ಪಡೆದುಕೊಂಡಿರುವ ಘಟನೆಯೊಂದು ನಡೆದಿದೆ. ಈ ಘಟನೆಯು ತಮಿಳುನಾಡಿನ ತಂಜಾವೂರ್ನಲ್ಲಿ ನಡೆದಿದ್ದು, ಮನೆಯೊಂದರಲ್ಲಿ ಪುರಾತನವಾದ ವಿಗ್ರಹಗಳನ್ನು ಇಡಲಾಗಿದೆ ಎಂಬ ಮಾಹಿತಿ ಮೇಲೆ ಆಧಾರದ ಮೇಲೆ ಸಿಐಡಿ ದಾಳಿ ನಡೆಸಿದ್ದು,
ಎನ್ ಅರುಣ್ ಮತ್ತು ಸಾಮಿಯಪ್ಪನ್ ಎಂಬುವರ ವಿಚಾರಣೆ ಮಾಡಿದಾಗ ಬ್ಯಾಂಕ್ ಲಾಕರ್ನಲ್ಲಿ ಬೆಲೆ ಬಾಳುವ ಪಚ್ಚೆ ಲಿಂಗ ಇಟ್ಟಿರುವ ಮಾಹಿತಿ ನೀಡಿದ್ದಾರೆ. ಈ ಲಿಂಗವು 530 ಗ್ರಾಂ ತೂಗುವ 8 ಇಂಚಿನ ಈ ಲಿಂಗ ಸಂಪೂರ್ಣ ಹಸಿರು ಪಚ್ಚೆ ಕಲ್ಲಿನಿಂದ ನಿರ್ಮಾಣವಾಗಿದೆ. ಈ ಮೂರ್ತಿಯ ಸದ್ಯದ ಮೌಲ್ಯವೇ 500 ಕೋಟಿ.

ಇಷ್ಟೊಂದು ಬೆಲೆ ಬಾಳುವ ಪಚ್ಚೆ ಲಿಂಗ ಇವರ ಕೈಗೆ ಬಂದಿದ್ದು ಹೇಗೆ ಎನ್ನುವ ತನಿಖೆ ನಡೆಯುತ್ತಿದೆ. ಈ ಲಿಂಗವು ಧರ್ಮಾಪುರ ಅಧೀನ ಪೀಠಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ. 2016ರಲ್ಲಿ ನಾಗಪಟ್ಟಣಂನ ಶಿವ ದೇಗುಲದ ಶಿವಲಿಂಗ ಕಳವು ಪ್ರಕರಣ ತನಿಖೆ ಮಾಡುತ್ತಿದ್ದ ಪೊಲೀಸರು ತನಿಖೆ ವೇಳೆ 500 ಕೋಟಿಯ ಪಚ್ಚೆ ಲಿಂಗ ಪತ್ತೆ ಮಾಡಿದ್ದಾರೆ.
