ಬಳ್ಳಾರಿ: ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಶಿಶು ಮರಣ ಹೆಚ್ಚಾಗುತ್ತಿದ್ದು, ಕೇವಲ 8 ತಿಂಗಳಲ್ಲಿ 358ಕ್ಕೂ ಅಧಿಕ ಶಿಶುಗಳ ಸಾವನಪ್ಪಿದೆ. ಹಸುಗೂಸುಗಳ ಮರಣದಿಂದ ಹೆಚ್ಚಳದಿಂದ ತೀವ್ರ ಆತಂಕ ಶುರುವಾಗಿದೆ. ಬಳ್ಳಾರಿಯಲ್ಲಿ 293, ವಿಜಯನಗರದಲ್ಲಿ 65 ಶಿಶುಗಳು ಸಾವನಪ್ಪಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ 290ಕ್ಕೂ ಹೆಚ್ಚು ಶಿಶು ಮೃತ ಪಟ್ಟಿವೆ. ಶಿಶುಗಳ ಸಾವಿನ ಪ್ರಮಾಣ ಹೆಚ್ಚಳದಿಂದ ಗಡಿ ಭಾಗದಲ್ಲಿ ಆತಂಕ ಹೆಚ್ಚಾಗಿದ್ದು,
ದಿನಕ್ಕೆ ಸರಾಸರಿ 3 ಹಸುಗೂಸುಗಳ ಸಾವನ್ನಪ್ಪುತ್ತಿವೆ. ಅಪೌಷ್ಟಿಕತೆ, ಅವಧಿ ಪೂರ್ವ ಪ್ರಸವ, ಸೋಂಕಿನಿಂದ ಆಸ್ಪತ್ರೆಗೆ ಗರ್ಭಿಣಿಯರು ಬರುವ ಮುನ್ನವೇ ಶಿಶು ಸಾವನ್ನಪ್ಪುತ್ತಿದ್ದು, ಆಸ್ಪತ್ರೆಗಳ ಕೊರತೆಯಿಂದ ಸಾವು ಸಂಭವಿಸುತ್ತಿವೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿ ತಾಲೂಕಿನಲ್ಲಿ ಸೂಕ್ತ ವ್ಯವಸ್ಥೆಯ ಆಸ್ಪತ್ರೆ ತೆರೆಯುವಂತೆ ಆಗ್ರಹ ಮಾಡುತ್ತಿದ್ದಾರೆ.

ಶಿಶುಗಳ ಸಾವಿಗೆ ಕಾರಣ..!
ಅಪೌಷ್ಟಿಕತೆ, ಕಡಿಮೆ ತೂಕ, ಪ್ರಿಮೆಚ್ಯೂರ್ ಸೇರಿದಂತೆ ಹೆರಿಗೆ ಸಂದರ್ಭದ ತೊಂದರೆ, ಇನ್ಫೆಕ್ಷನ್ನಿಂದಾಗಿ ಶೀಶು ಸಾವನಪ್ಪುತ್ತಿವೆ. ಗರ್ಭ ಧರಿಸಿದ ತಾಯಂದಿರ ಆರೈಕೆಯಲ್ಲಿ ನಿರ್ಲಕ್ಷ್ಯ, ಪೌಷ್ಟಿಕ ಆಹಾರ, ಟ್ಯಾಬ್ಲೆಟ್, ತಿಂಗಳಿಗೊಮ್ಮೆ ಚೆಕಪ್ ಮಾಡಿಸದಿರುವುದು, ಹೆರಿಗೆ ಸಂದರ್ಭದಲ್ಲಿ ತಾಯಂದಿರ ಆರೋಗ್ಯದಲ್ಲಿ ಏರುಪೇರು ಸಾವಿಗೆ ಕಾರಣವಾಗುತ್ತಿದೆ.ಹೆರಿಗೆ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯೂ ಒಂದು ಕಾರಣವಾಗಿದ್ದು,
ಪ್ರತಿ ತಾಲೂಕು ಘಟಕಗಳಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಕೊರತೆ ಇದ್ದು, ಹಳ್ಳಿಗಳಿಂದ ಬಳ್ಳಾರಿಯಲ್ಲಿರುವ ವಿಮ್ಸ್ ಆಸ್ಪತ್ರೆಗೆ ಬರಬೇಕಾಗುತ್ತದೆ. ಆಸ್ಪತ್ರೆಗೆ ಬರುವ ಮೊದಲೇ ಮಾರ್ಗ ಮದ್ಯದಲ್ಲೇ ಶಿಶುಗಳ ಸಾವು ಸಂಭವಿಸುವುದೇ ಹೆಚ್ಚಾಗಿದ್ದು, ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ಟ್ರೀಟ್ಮೆಂಟ್ ಪಡೆಯುವುದು ಕಷ್ಟವಾಗಿದೆ. ಏನು ಅರಿಯದ ಕಂದಮ್ಮಗಳು ಪ್ರಪಂಚ ನೋಡುವುದಕ್ಕೂ ಮುನ್ನ ಸಾವನಪ್ಪುತ್ತಿರುವುದು ವಿಪರ್ಯಾಸ.
