ಬೆಂಗಳೂರು:- ನಗರದ ಹೈಕೋರ್ಟ್ ಪೀಠವು ಮಹತ್ವದ ತೀರ್ಪು ನೀಡಿದ್ದು, ಮೃತ ಸರ್ಕಾರಿ ನೌಕರನ 2ನೇ ಪತ್ನಿಗೆ ಕುಟುಂಬ ಪಿಂಚಣಿ ಅಧಿಕಾರವಿಲ್ಲ ಎಂದು ಹೇಳಿದೆ.
ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾ.ಕೃಷ್ಣ ಎಸ್ ದೀಕ್ಷಿತ್ರಿದ್ದ ಪೀಠ ಆದೇಶಿಸಿದೆ. ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಕುಟುಂಬ ಪಿಂಚಣಿ ಅಧಿಕಾರವಿದೆ. ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹೀಗಾಗಿ ಪಿಂಚಣಿಯ ಹಕ್ಕನ್ನು 2ನೇ ಪತ್ನಿ ಕೇಳುವಂತಿಲ್ಲ ಎಂದು ಹೇಳಿದೆ.
ಇನ್ನೂ ಈ ಪಿಂಚಣಿ ಎಂಬುದು ಸಾಮಾನ್ಯವಾಗಿ, ಜನರು ಉದ್ಯೋಗದಿಂದ ಕ್ರಮಬದ್ಧ ವರಮಾನವನ್ನು ಗಳಿಸದಿರುವಂಥ ಕಾಲದಲ್ಲಿ ಅವರಿಗೆ ವರಮಾನವನ್ನು ಒದಗಿಸುವಂತಹ ಒಂದು ವ್ಯವಸ್ಥೆಯಾಗಿದೆ.