ಬೆಂಗಳೂರು:- ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ- 2 ಶುರುವಾಗಲಿದೆ. 29-04-29 ರಿಂದ 16-05-2024 ರವರೆಗೆ ಪಿಯುಸಿ ಪರೀಕ್ಷೆ -2 ನಡೆಯಲಿದ್ದು, ದಾಖಲೆಯ ಪ್ರಮಾಣದಲ್ಲಿ ಪಿಯು ವಿದ್ಯಾರ್ಥಿಗಳ ನೊಂದಣಿ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಪಾಸ್ ಆಗಿದ್ರೂ ಕೂಡಾ ಹಳೆಯ ಫಲಿತಾಂಶ ಚಾಲೆಂಜ್ ಮಾಡಲು 32 ಸಾವಿರ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ.
ಹಾಸನ ಪ್ರಕರಣ: ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದ ಹೆಚ್.ಡಿ.ಕುಮಾರಸ್ವಾಮಿ
ಸೋಮುವಾರದಿಂದ ಶುರುವಾಗುವ ದ್ವಿತೀಯ ಪಿಯುಸಿ -2 ಪರೀಕ್ಷೆಗೆ ರಾಜ್ಯದಲ್ಲಿ ಒಟ್ಟು149300 ವಿದ್ಯಾರ್ಥಿಗಳು ನೊಂದಣಿಮಾಡಿಕೊಂಡಿದ್ದಾರೆ.. ಇದರಲ್ಲಿ 32 ಸಾವಿರ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಉತೀರ್ಣವಾಗಿದ್ರೂ ಫಲಿತಾಂಶ ಹೆಚ್ಚಿಸಲು ಮರು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಇನ್ನು ಪ್ರತಿಯೊಂದು ವಿಷಯದ ಪರೀಕ್ಷೆಯು ಮಧ್ಯಾಹ್ನ 2-15 ರಿಂದ ಸಂಜೆ 04-30 ಗಂಟೆವರೆಗೆ ನಡೆಯಲಿದೆ.
ಒಟ್ಟಿನಲ್ಲಿ ಈಗಾಗಲೆ ದ್ವಿತೀಯ ಪಿಯುಸಿ ಪರೀಕ್ಷೆಗೆ ದಿನಾಂಕ ಕೂಡಾ ನಿಗಧಿಯಾಗಿದ್ದು ಹಾಲ್ ಟಿಕೆಟ್ ಕೂಡಾ ಡೌನ್ ಲೋಡ್ ಮಾಡಲು ಇಲಾಖೆ ಅವಕಾಶ ನೀಡಿದ್ದು ಅತ್ಯಂತ ಕಡಿಮೆ ಅವಧಿಯಲ್ಲಿ ಈ ಎರಡನೇ ಪರೀಕ್ಷೆ ನಡೆಯುತ್ತಿದ್ದು ವಿದ್ಯಾರ್ಥಿಗಳು ಈ ಅವಕಾಶ ಸರಿಯಾದ ಸದುಪಯೋಗಪಡಿಸಿಕೊಳ್ಳಬೇಕಿದೆ.
ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ
29-04-2024- ಕನ್ನಡ, ಅರೇಬಿಕ್
30-04-2024-ಇತಿಹಾಸ / ಭೌತಶಾಸ್ತ್ರ
02-05-2024-ಇಂಗ್ಲಿಷ್
03-05-2024-ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
04-05-2024-ಭೂಗೋಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಗೃಹವಿಜ್ಞಾನ, ಮೂಲಗಣಿತ
09-05-2024-ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ
11-05-2024-ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
13-05-2024-ಅರ್ಥಶಾಸ್ತ್ರ
14-05-2024-ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
15-05-2024-ಹಿಂದಿ
16-05-2024-ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೆಬಿಕ್, ಫ್ರೆಂಚ್
16-05-2024-ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಬ್ಯೂಟಿ ಅಂಡ್ವೆಲ್ನೆಸ್ , ಆಟೋಮೊಬೈಲ್, ರೀಟೈಲ್