Bengaluru: ಕಬ್ಬನ್ ಪಾರ್ಕ್​​ನೊಳಗೆ ವಾಹನ ಸಂಚಾರಕ್ಕೆ 2 ಮತ್ತು 4ನೇ ಶನಿವಾರ ಅನುಮತಿ!

ಬೆಂಗಳೂರು:- 2 ಮತ್ತು 4ನೇ ಶನಿವಾರ ಕಬ್ಬನ್ ಪಾರ್ಕ್​​ನೊಳಗೆ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಫೆಬ್ರವರಿ 8 ರಂದು ತೋಟಗಾರಿಕಾ ಇಲಾಖೆ ಆದೇಶ ನೀಡಿದ್ದು, ಪ್ರವಾಸಿಗರು ಹಾಗೂ ಆ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಂತಸ ನೀಡಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಸುಗಮ ಸಂಚಾರಕ್ಕಾಗಿ ಕಬ್ಬನ್ ಪಾರ್ಕ್ ಆವರಣದೊಳಗೆ ಹೈಕೋರ್ಟ್‌ನಿಂದ ಸಿದ್ದಲಿಂಗಯ್ಯ ವೃತ್ತ ಮತ್ತು ಸಿದ್ದಲಿಂಗಯ್ಯ ವೃತ್ತದಿಂದ ಹೈಕೋರ್ಟ್​ ಭಾಗದವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೂರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ಈ ಅವಕಾಶ ನೀಡಲಾಗಿದೆ. … Continue reading Bengaluru: ಕಬ್ಬನ್ ಪಾರ್ಕ್​​ನೊಳಗೆ ವಾಹನ ಸಂಚಾರಕ್ಕೆ 2 ಮತ್ತು 4ನೇ ಶನಿವಾರ ಅನುಮತಿ!